
ಅಳವಂಡಿ: ‘ಹಿರೇಸಿಂದೋಗಿ ಗ್ರಾಮವನ್ನು ಹೋಬಳಿ ಕೇಂದ್ರ ಮಾಡಲು ತೀರ್ಮಾನಿಸಿದ್ದು ಈಗಾಗಲೇ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಮಾಡಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿ ಜಿ.ಪಂ ವ್ಯಾಪ್ತಿಯ ದದೇಗಲ್, ಹಲಗೇರಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಗುನ್ನಳ್ಳಿ, ಹೊರತಟ್ನಾಳ ಹಾಗೂ ಮಂಗಳಾಪೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಹಿರೇಸಿಂದೋಗಿ ಗ್ರಾಮದಿಂದ ಮೈನಹಳ್ಳಿ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಿ, ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೇರವೇರಿಸಿದ್ದು, ಕೂಡಲೇ ಕಾಮಗಾರಿ ಪ್ರಾರಂಭ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಗ್ರಾ.ಪಂ ಅಧ್ಯಕ್ಷರಾದ ಗಾಳೆವ್ವ ಪೂಜಾರ, ಶಿವಮ್ಮ ಪೂಜಾರ, ಮುಖಂಡರಾದ ಗೂಳಪ್ಪ ಹಲಗೇರಿ, ಪ್ರಸನ್ನ ಗಡಾದ, ಕೃಷ್ಣಾರೆಡ್ಡಿ ಗಲಬಿ, ಹನುಮರೆಡ್ಡಿ ಅಂಗನಕಟ್ಟಿ, ಗಾಳೆಪ್ಪ ಪೂಜಾರ, ಕೇಶವರಡ್ಡಿ, ನಿಂಗಪ್ಪ ಯತ್ನಟ್ಟಿ, ಡಿಎಚ್ಒ ಲಿಂಗರಾಜ, ಪಂಪಣ್ಣ ಪೂಜಾರಿ, ಹನುಮಂತ ಹಳ್ಳಿಕೇರಿ, ಸುರೇಶ, ದೇವಪ್ಪ ಹಲಗೇರಿ, ವಸಂತ ಹೊರತಟ್ನಾಳ, ವಿರುಪಾಕ್ಷಪ್ಪ, ಶಿವಣ್ಣ, ಅಂದಾನಸ್ವಾಮಿ, ಮಲ್ಲು ಪೂಜಾರ, ಗವಿಸಿದ್ದನಗೌಡ, ಪರಶುರಾಮ, ಅಕ್ಬರ್ ಪಲ್ಟನ್, ತಹಸೀಲ್ದಾರ್ ವಿಠಲ್ ಚೌಗಲೆ, ತಾ.ಪಂ ಇಒ ದುಂಡಪ್ಪ ತುರಾದಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.