ADVERTISEMENT

ಹೆಜ್ಜೇನು ದಾಳಿ; ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:10 IST
Last Updated 18 ಫೆಬ್ರುವರಿ 2020, 10:10 IST
ಯಲಬುರ್ಗಾ ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ಸೋಮವಾರ ಹೆಜ್ಜೇನು ದಾಳಿಗೆ ಒಳಗಾದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು
ಯಲಬುರ್ಗಾ ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ಸೋಮವಾರ ಹೆಜ್ಜೇನು ದಾಳಿಗೆ ಒಳಗಾದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು   

ಯಲಬುರ್ಗಾ: ಸ್ಥಳೀಯ ತಹಶೀಲ್ ಕಚೇರಿ ಆವರಣದಲ್ಲಿ ನಡೆದ ಹೆಜ್ಜೇನು ದಾಳಿಯಲ್ಲಿ ಬಾಲಕ ಸೇರಿ ಐವರು ಗಾಯಗೊಂಡಿದ್ದಾರೆ.

ಗಾಯಾಳುಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ಮಧ್ಯಾಹ್ನ ದಾಳಿ ನಡೆದಿದೆ. ಚಂಡೂರು ಗ್ರಾಮದ ಬಸಯ್ಯ, ಕಲ್ಲೂರು ಗ್ರಾಮದ ಹನಮಂತಪ್ಪ ಹಿರೇಕುರುಬರ, ಧರ್ಮರಾಜ ಹಿರೇಕುರುಬರ ಹಾಗೂ ಹಗೆದಾಳದ ಸೋಮನಗೌಡ ಮತ್ತು ಮೂರು ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಕಚೇರಿ ಆವರಣದಲ್ಲಿರುವ ಹುಣಸೆ ಮರದಲ್ಲಿದ್ದ ಹೆಜ್ಜೇನು ಗೂಡಿನಿಂದ ಹುಳುಗಳು ದಾಳಿ ನಡೆಸಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊದಲಿಗೆ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸೋಮನಗೌಡ ಎಂಬವರು ಸ್ಥಳದಲ್ಲಿಯೇ ಕುಸಿದು ತೀವ್ರ ಅಸ್ವಸ್ಥ್ಯಗೊಳ್ಳುತ್ತಿದ್ದಂತೆ ಕೆಲ ಯುವಕರು ಅವರನ್ನು ರಕ್ಷಿಸಲು ಮುಂದಾದರು, ಹೆಲ್ಮೆಟ್ ಹಾಗೂ ವಸ್ತ್ರಗಳನ್ನು ಹೊಚ್ಚಿಕೊಂಡು ಗಾಯಾಳುಗಳನ್ನು ದಾಳಿ ಸ್ಥಳಗಳಿಂದ ಕರೆತಂದರು. ಆಂಬುಲೆನ್ಸ್ ಬರುವಷ್ಟರಲ್ಲಿ ಮತ್ತೆ ಮೂರ್ನಾಲ್ಕು ಜನರಿಗೆ ಕಚ್ಚಿದ್ದವು. ಅವರೆಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.