ADVERTISEMENT

ಸಮಾಜದ ಅಭಿವೃದ್ಧಿಗೆ ಶ್ರಮಿಸಿ

ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎ.ಈ. ಸೂರಿಬಾಬು ಸಲಹೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 12:26 IST
Last Updated 10 ಆಗಸ್ಟ್ 2021, 12:26 IST
ಗಂಗಾವತಿ ತಾಲ್ಲೂಕಿನ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎ.ಈ ಸೂರಿಬಾಬು ಅವರ ಸ್ವಗೃಹದಲ್ಲಿ ಈಡಿಗ ಸಮಾಜ ಯುವ ವೇದಿಕೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ‌ ನಡೆಯಿತು
ಗಂಗಾವತಿ ತಾಲ್ಲೂಕಿನ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎ.ಈ ಸೂರಿಬಾಬು ಅವರ ಸ್ವಗೃಹದಲ್ಲಿ ಈಡಿಗ ಸಮಾಜ ಯುವ ವೇದಿಕೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ‌ ನಡೆಯಿತು   

ಗಂಗಾವತಿ: ‘ಆರ್ಯ ಈಡಿಗ ಸಮಾಜದ ಅಭಿವೃದ್ಧಿಯ ಉದ್ದೇಶದಿಂದ ಸಂಘ ರಚಿಸಿರುವುದು ಸಂತಸದ ವಿಷಯ. ಗ್ರಾಮೀಣ ಭಾಗದಲ್ಲೂ ಸಂಘಗಳನ್ನು ಕಟ್ಟಿ ಬೆಳಸುವ ಕೆಲಸ ಮಾಡಬೇಕು’ ಎಂದು ಈಡಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎ.ಈ. ಸೂರಿಬಾಬು ಹೇಳಿದರು.

ತಮ್ಮ ಸ್ವಗೃಹದಲ್ಲಿ ನಡೆದ ಆರ್ಯ ಈಡಿಗ ಯುವ ವೇದಿಕೆ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಜೆಪಿಎನ್‌ಪಿ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಹೆಂಡ ಮಾರಾಟ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುತ್ತದೆ ಎಂದರು.

ತಾಲ್ಲೂಕಿನಲ್ಲಿ ಈಡಿಗ ಯುವ ವೇದಿಕೆ ನಿರ್ಮಾಣ ಸಂಬಂಧ ಪೂರ್ವಭಾವಿ ಸಭೆ ನಡೆದಿತ್ತು. ಅದರಂತೆ ಈಡಿಗ ಸಮಾಜದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅದರಲ್ಲಿ ಆರ್ಯ ಈಡಿಗ ಯುವ ವೇದಿಕೆಯ ಅಧ್ಯಕ್ಷ ಗಣೇಶ ಬಿಚ್ಚಾಲಿ (ಗಂಗಾವತಿ), ಉಪಾಧ್ಯಕ್ಷ ಬಸವರಾಜ ಗುಳದಾಳ (ಕಾರಟಗಿ), ಗೌರವ ಅಧ್ಯಕ್ಷ ಶ್ರವಣಕುಮಾರ್, ಪ್ರಧಾನ‌ ಕಾರ್ಯದರ್ಶಿ ಬಸವರಾಜ ಎಳಬೆಂಚಿ (ವಡ್ಡರಹಟ್ಟಿ), ಖಜಾಂಚಿ ರಮೇಶ ಸೆಂತೆಬಯಲು, ಸಂಚಾಲಕ ಶರಣಪ್ಪ ದಳಪತಿ‌ ಮರಕುಂಬಿ, ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಚಿಕ್ಕಜಂತಗಲ್, ಕಾನೂನು ಸಲಹೆಗಾರ ಮಲ್ಲೇಶ ಚಿಕ್ಕಡಂಕನಕಲ್ ಹಾಗೂ ಮಾಧ್ಯಮ ಸಲಹೆಗಾರರನ್ನಾಗಿ ಶುಕ್ರಾಜ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಶ್ರವಣಕುಮಾರ, ಮದ್ದಾನಪ್ಪ, ರುದ್ರೇಶ ಆರ್ಹಾಳ, ಈ.ನಾಗರಾಜ ಸೇರಿ ಗಂಗಾವತಿ, ಕಾರಟಗಿ, ಕನಕಗಿರಿ ಸಮಾಜದ ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.