ADVERTISEMENT

ರಂಜಾನ್‌ ಅಂಗವಾಗಿ ಆಟೊ ಚಾಲಕರಿಂದ ಇಫ್ತಾರ್‌ ಕೂಟ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 18:08 IST
Last Updated 16 ಮಾರ್ಚ್ 2025, 18:08 IST

ಕೊಪ್ಪಳ: ರಂಜಾನ್‌ ಅಂಗವಾಗಿ ಕೊಪ್ಪಳದ ಆಟೊ ಚಾಲಕರ ಮತ್ತು ಮಾಲೀಕರ ಸಂಘದಿಂದ ನಗರದ ಯೂಸೂಫಿಯ ಮಸೀದಿಯ ಆವರಣದಲ್ಲಿ ಶನಿವಾರ ಇಫ್ತಾರ್‌ ಕೂಟ ನಡೆಯಿತು.

ಮಸೀದಿಯ ಗುರು ಹಜರತ್ ಮುಫ್ತಿ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್ ಕೂಟ ಆಯೋಜಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಭಾವೈಕ್ಯದ ತಾಣ ಕೊಪ್ಪಳದಲ್ಲಿ ಹಿಂದೂ–ಮುಸ್ಲಿಮರು ಸಹೋದರರಂತೆ ಇದ್ದೇವೆ ಎಂದರು.  

ಸಂಘದ ಗೌರವಾಧ್ಯಕ್ಷ ಎಂ ಮಾನ್ವಿ ಪಾಶಾ, ಅಧ್ಯಕ್ಷ ಗವಿಸಿದ್ದಪ್ಪ ಚಾಕ್ರಿ, ಉಪಾಧ್ಯಕ್ಷ ಖಾಜಾಸಾಬ್ ಡ್ರೈವರ್, ಪ್ರಧಾನ ಕಾರ್ಯದರ್ಶಿ ನಜೀರ್ ಅಹಮದ್ ಶರೀಫ್,  ಪದಾಧಿಕಾರಿಗಳಾದ ದಾದಾಪೀರ್, ತನ್ವೀರ್ ಪಾಷಾ, ಮುದಸ್ಸೀರ್‌, ಯೂಸುಫ್‌, ಶರಣಪ್ಪ ಅಂಗಡಿ, ನಜೀರ್, ಮರ್ದಾನ್ ಸಾಬ್ ಕೊತ್ವಾಲ್‌, ನಜೀರ್ ಎಸ್., ಇಸ್ಮಾಯಿಲ್ ಅರಗಂಜಿ, ಸ್ವಾಮಿ ಮೇಟಿ, ಮೆಹಬೂಬಸಾಬ್ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.