ADVERTISEMENT

ಕಲ್ಲು ಕಂಬ ಅಕ್ರಮ ಸಾಗಾಟ: ಲಾರಿ ವಶ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 2:32 IST
Last Updated 2 ಅಕ್ಟೋಬರ್ 2021, 2:32 IST
ಗಂಗಾವತಿ ನಗರದ ಜುಲೈ ನಗರದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ಆಕ್ರಮವಾಗಿ ಕಲ್ಲು ಕಂಬ ಸಾಗಾಟ ನಡೆಸುತ್ತಿರುವ ಲಾರಿಯ ಮೇಲೆ ತಹಶೀಲ್ದಾರ ಯು.ನಾಗರಾಜ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಈ ವೇಳೆಯಲ್ಲಿ ಸಂಚಾರಿ ಪೋಲಿಸ್ ಠಾಣೆಯ ಸಿಬ್ಬಂದಿ ಇದ್ದರು.
ಗಂಗಾವತಿ ನಗರದ ಜುಲೈ ನಗರದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ಆಕ್ರಮವಾಗಿ ಕಲ್ಲು ಕಂಬ ಸಾಗಾಟ ನಡೆಸುತ್ತಿರುವ ಲಾರಿಯ ಮೇಲೆ ತಹಶೀಲ್ದಾರ ಯು.ನಾಗರಾಜ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಈ ವೇಳೆಯಲ್ಲಿ ಸಂಚಾರಿ ಪೋಲಿಸ್ ಠಾಣೆಯ ಸಿಬ್ಬಂದಿ ಇದ್ದರು.   

ಗಂಗಾವತಿ: ದ್ರಾಕ್ಷಿ ತೋಟಕ್ಕೆ ಬಳಸುವ ಕಲ್ಲಿನ ಕಂಬಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಲಾರಿಯನ್ನು ತಹಶೀಲ್ದಾರ ಯು.ನಾಗರಾಜ ನೇತೃತ್ವದಲ್ಲಿನ ತಂಡ ಜುಲೈನಗರದ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದಿದೆ.

ಮಲ್ಲಾಪುರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ದ್ರಾಕ್ಷಿ ತೋಟಕ್ಕೆ ಬಳಸುವ ಕಲ್ಲಿನ ಕಂಬಗಳನ್ನು ಲಾರಿ ಮೂಲಕ ಸಾಗಿಸಲಾಗುತ್ತಿದೆ ಎಂದು ಸಹಾಯ ಆಯುಕ್ತರಿಗೆ ಕರೆ ಬಂದಿತ್ತು.

ಕೂಡಲೇ ಗಂಗಾವತಿ ತಹಶೀಲ್ದಾರರಿಗೆ ಕರೆ ಮಾಡಿ, ಲಾರಿ ವಶಕ್ಕೆ ಪಡೆಯುವಂತೆ ಸೂಚನೆ ನೀಡಿದ್ದರು. ಆದ್ದರಿಂದ ತಹಶೀಲ್ದಾರ ಕಲ್ಲು ಆಕ್ರಮವಾಗಿ ಸಾಗಿಸುತ್ತಿರುವ ಲಾರಿ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಅಲ್ಲಿ ಚಾಲಕ ಮತ್ತು ಕ್ಲೀನರ್ ಲಾರಿ ಬಿಟ್ಟು ಪರಾರಿಯಾಗಿದ್ದರು.

ADVERTISEMENT

ಕೂಡಲೇ ಮೆಕಾನಿಕ್ ಒಬ್ಬರನ್ನು ಕರೆಯಿಸಿ ಅವರ ನೆರವಿನಿಂದ ಲಾರಿಯನ್ನು ಸ್ಥಳಿಯ ಠಾಣೆಗೆ ತಂದು ನಿಲ್ಲಿಸಲಾಯಿತು. ಈ ವೇಳೆಯಲ್ಲಿ ಸಂಚಾರಿ ಠಾಣೆಯ ಪಿಎಸ್ಐ ಪುಂಡಲಿಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.