ADVERTISEMENT

ಸಂಶೋಧನೆ, ಚಿಕಿತ್ಸೆಗೆ ಅನುಕೂಲ- ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಬಸಪ್ಪ ಆಚಾರ್

ಪಾಲಿ ಕ್ಲಿನಿಕ್ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 13:03 IST
Last Updated 4 ಜನವರಿ 2022, 13:03 IST
ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ನಡೆದ ಪಾಲಿ ಕ್ಲಿನಿಕ್ ಉದ್ಘಾಟನೆ ಪ್ರಯುಕ್ತ ಸಚಿವ ಆಚಾರ ಗೋವು ಪೂಜೆ ಮಾಡಿ ಕಟ್ಟಡ ಉದ್ಘಾಟಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಇದ್ದರು
ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ನಡೆದ ಪಾಲಿ ಕ್ಲಿನಿಕ್ ಉದ್ಘಾಟನೆ ಪ್ರಯುಕ್ತ ಸಚಿವ ಆಚಾರ ಗೋವು ಪೂಜೆ ಮಾಡಿ ಕಟ್ಟಡ ಉದ್ಘಾಟಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಇದ್ದರು   

ಕೊಪ್ಪಳ: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಾಲಿ ಕ್ಲಿನಿಕ್ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಬಸಪ್ಪ ಆಚಾರ್ ಉದ್ಘಾಟಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ನಗರದ ಹೊಸಪೇಟೆ ರಸ್ತೆಯ ಬಿ.ಟಿ.ಪಾಟೀಲ್ ನಗರದಲ್ಲಿ ನಿರ್ಮಾಣಗೊಂಡ ಉಪನಿರ್ದೇಶಕರ ಕಚೇರಿ ಪಾಲಿ ಕ್ಲಿನಿಕ್ ನೂತನ ಕಟ್ಟಡದ ಉದ್ಘಾಟಿಸಿದರು.

ಸಂಸದರು ಹಾಗೂ ಶಾಸಕರೊಂದಿಗೆ ಸೇರಿ ಸಚಿವರು, ಗೋವುಗಳಿಗೆ ಪೂಜೆ ಸಲ್ಲಿಸಿ, ಅವುಗಳಿಗೆ ಆಹಾರ ತಿನಿಸಿದರು.

ADVERTISEMENT

ಲ್ಯಾಬ್ ಕಟ್ಟಡ ವೀಕ್ಷಣೆ: ಪಾಲಿ ಕ್ಲಿನಿಕ್‌ನ ನೂತನ ಕಟ್ಟಡ ಹಾಗೂ ನಿರ್ಮಾಣ ಹಂತದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಲ್ಯಾಬ್ ಕಟ್ಟಡಉದ್ಘಾಟಿಸಿ ವೀಕ್ಷಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ(ಆ) ಉಪನಿರ್ದೇಶಕ ಡಾ.ಎಚ್.ನಾಗರಾಜ ಮಾತನಾಡಿ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಲ್ಯಾಬ್ ಜಿಲ್ಲೆಯಲ್ಲಿ ಇರಲಿಲ್ಲ. ರೋಗದ ಬಗ್ಗೆ ಅಥವಾ ಪಶುಗಳ ಮರಣೋತ್ತರ ಪರೀಕ್ಷೆಗಾಗಿ ಶ್ಯಾಂಪಲ್ಸ್ ಅನ್ನು ಬಳ್ಳಾರಿ, ರಾಯಚೂರು ಜಿಲ್ಲೆಗಳಿಗೆ ಕಳಹಿಸಬೇಕಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಸಕಾಲಕ್ಕೆ ವರದಿ ಸಲ್ಲಿಸಲು ಹಾಗೂ ರೈತರಿಗೆ ಪರಿಹಾರ ಒದಗಿಸಲು ವಿಳಂಬವಾಗುತ್ತಿತ್ತು. ಈ ಲ್ಯಾಬ್ ನಿರ್ಮಾಣದಿಂದ ಜಿಲ್ಲೆಯಲ್ಲಿ ಸಹಾಯಧನ ಪ್ರಕ್ರಿಯೆ ಹಾಗೂ ಅಗತ್ಯ ಕ್ರಮಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಕುರಿ ಸಾಕಾಣಿಕೆ ಪರಿಕರಗಳ ವಿತರಣೆ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದಿಂದ ಪ್ರಸಕ್ತ ಸಾಲಿನ ಸಂಚಾರಿ/ ಅರೆಸಂಚಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಟೆಂಟ್ ಹಾಗೂ ಇನ್ನಿತರೆ ಪರಿಕರಗಳ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಸಂಸದ ಕರಡಿ ಸಂಗಣ್ಣ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಪಾಲಿಕ್ಲಿನಿಕ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಅಶೋಕ್ ಎಸ್. ಘೋಣಸಗಿ, ಕೊಪ್ಪಳ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕ ಡಾ.ಯಮನಪ್ಪ ಬಿ.ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.