
ಕೊಪ್ಪಳ: ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 41ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ ‘ಇಂದಿರಾಗಾಂಧಿ ರೀತಿ ಮತ್ತೊಬ್ಬರು ಪ್ರಧಾನಿ ಪಡೆಯುವುದು ಕಷ್ಟಸಾಧ್ಯ, ಅವರಂತೆ ಅವರ ಮೊಮ್ಮಗ ಇಂದು ದೇಶದ ಸರ್ವ ಜನರ ಹಿತಕಾಯುವ ಕೆಲಸ ಮಾಡುತ್ತಿದ್ದಾರೆ. ಅವರ ಮೂಲಕ ಮತ್ತೊಮ್ಮೆ ಇಂದಿರಾ ಗಾಂಧಿ ಅವರ ಆಡಳಿತ ನೋಡಬಹುದು’ ಎಂದರು.
ಮುಖಂಡರಾದ ಕಿಶೋರಿ ಬೂದನೂರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಅಕ್ಬರ್ ಪಾಶಾ ಪಲ್ಟನ್, ನಗರಸಭೆ ಸದಸ್ಯ ಬಸಯ್ಯ ಹಿರೇಮಠ, ಚನ್ನಪ್ಪ ಹಂಚಿನಾಳ, ಸರಸ್ವತಿ, ರಾಜೀವ್ ಗಾಂಧಿ ಪಂಚಾಯತ್‍ರಾಜ್ ಸೆಲ್ ಸಂಯೋಜಕ ಸುರೇಶ ದಾಸರಡ್ಡಿ, ಮುಖಂಡರಾದ ಮಾನವಿ ಪಾಶಾ, ಅಜ್ಜಪ್ಪಸ್ವಾಮಿ, ನಾಸೀರ ಹುಸೇನ್, ರೇಖಾ, ಅಂಜಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.