ADVERTISEMENT

ಬೀರಲಿಂಗೇಶ್ವರ ಜಾತ್ರೆ: ಪುರಾಣ ಆರಂಭ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 3:40 IST
Last Updated 9 ಮಾರ್ಚ್ 2021, 3:40 IST
ಹುನುಮಸಾಗರ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಯಿತು
ಹುನುಮಸಾಗರ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರವಚನ ನಡೆಯಿತು   

ಹನುಮಸಾಗರ: ಇಲ್ಲಿನ ಬೀರಲಿಂಗೇಶ್ವರರ 3ನೇ ವರ್ಷದ ಜಾತ್ರಾಮಹೋತ್ಸವದ ಪ್ರಯುಕ್ತ ಸಜ್ಜಲಗುಡ್ಡದ ಶರಣಮ್ಮ ತಾಯಿಯವರ ಪುರಾಣ ಪ್ರಾರಂಭೋತ್ಸವ ನಡೆಯಿತು.

ಮುಖಂಡ ನಾಗರಾಜ ಹಕ್ಕಿ ಮಾತನಾಡಿ,‘ಸಾರ್ವಜನಿಕರ, ಭಕ್ತರ ಸಹಕಾರವೇ ಜಾತ್ರಾಮಹೋತ್ಸವದ ಯಶಸ್ಸಿಗೆ ಕಾರಣ. ಜಾತ್ರೆ ಯಶಸ್ಸಿಗೆ ತಾವೆಲ್ಲರೂ ಕೈಜೋಡಿಸಿ’ ಎಂದು ಹೇಳಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಶಿವಸಿದ್ದೇಶ್ವರ ಸ್ವಾಮಿಗಳು ಮಾತನಾಡಿ,‘ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡುವ ಜತೆಗೆ ಸೌಹಾರ್ದಯುತವಾಗಿ ಬದುಕುವುದನ್ನು ಕಲಿಸಬೇಕಾದ ಅನಿವಾರ್ಯತೆ ಇದೆ’ ಎಂದರು.

ADVERTISEMENT

ಮುಖಂಡ ಭರಮಪ್ಪ ಬಿಂಗಿ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಸಕ್ರಪ್ಪ ಬಿಂಗಿ, ಗ್ರಾ.ಪಂ.ಸದಸ್ಯರಾದ ಬಸವರಾಜ ಅಕ್ಕಿ, ಬಸವರಾಜ ಬಿಲ್ಕಾರ, ಲಕ್ಷ್ಮೀಬಾಯಿ ತಿಮ್ಮನಗೌಡ ಪೊಲೀಸ್‌ ಪಾಟೀಲ, ಮುಖಂಡರಾದ ಹನುಮಂತಪ್ಪ ಬಿಂಗಿ, ರೇಣಮ್ಮ ಪರಸಪ್ಪ ಕುಂಬಳಾವತಿ, ನೀಲವ್ವ ಹನುಮಂತಪ್ಪ ಹಕ್ಕಿ, ಹನಮವ್ವ ಶಿವನಪ್ಪ ಕಂದಗಲ್, ಕಾಳಪ್ಪ ಕುಷ್ಟಗಿ, ಬಸಪ್ಪ ಕಿಲ್ಲೇದ, ದ್ಯಾಮಣ್ಣ ಬಿಂಗಿ, ಕನಕಪ್ಪ ಗುರಿಕಾರ, ಯಂಕಪ್ಪ ಗಡೇಕಾರ, ಮಲ್ಲಣ್ಣ ಹುಲಿ, ನಿಂಗಪ್ಪ ಬಾಗಲಿ ಹಾಗೂ ಹಿರಗಪ್ಪ ಗಡೇಕಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.