ಮೇಣೆದಾಳ (ತಾವರಗೇರಾ): ಸಮೀಪದ ಮೇಣೆದಾಳ ಗ್ರಾಮದಲ್ಲಿರುವ ದೇಸಾಯಿಯವರ ಕುಟುಂಬಕ್ಕೆ ಸೇರಿದ ವಾಡೆಯಲ್ಲಿ ಜಗನ್ನಾಥ ದಾಸರ ಜೀವನಾಧಾರಿತ ಕಿರುಚಿತ್ರದ ಚಿತ್ರೀಕರಣ ನಡೆಯುತ್ತಿದೆ.
‘ಬೆಂಗಳೂರಿನ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮಂತ್ರಾಲಯದಲ್ಲಿ ಶ್ರೀಗಳು ಚಾಲನೆ ನೀಡಿದ್ದಾರೆ. ರಾಯರ 350 ನೇ ಆರಾಧನಾ ಮಹೋತ್ಸವದ ದಿನ ಇದನ್ನು ಬಿಡುಗಡೆ ಮಾಡುವ ಗುರಿ ಇದೆ’ ಎಂದು ನಿರ್ದೇಶಕ ಮಧುಸೂದನ್ ಹವಲ್ದಾರ ತಿಳಿಸಿದರು.
‘ಕಿರುತೆರೆ ನಟ, ನಟಿಯರು ನಟಿಸುತ್ತಿದ್ದಾರೆ. ನಟಿ ನಿಶ್ಚಿತಾ ಶೆಟ್ಟಿ, ಹೈದರಾಬಾದ್‌ನ ಶರತ್, ರಾಯಚೂರಿನ ಧೀರೇಂದ್ರ, ಪದ್ಮಕಲಾ, ಸುರೇಶ ಹಾವೇರಿ ನಟಿಸುತ್ತಿದ್ದಾರೆ. ಮೆಣೇದಾಳ ದೇಸಾಯಿ ಮನೆತನದ ಧನಶ್ರೀ ದೇವಿ ಗೌರವ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿ ಚಿತ್ರೀಕರಣ ಮುಗಿಸಿಕೊಂಡು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶೂಟಿಂಗ್ ನಡೆಸಲಿದ್ದೇವೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.