ಜೈಲು (ಪ್ರಾತಿನಿಧಿಕ ಚಿತ್ರ)
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಪಲದಿನ್ನಿ ಸೀಮಾದಲ್ಲಿ ಜಮೀನುಗಳ ಮಧ್ಯದಲ್ಲಿರುವ ದಾರಿಯ ವಿಷಯದ ಕುರಿತು ನಡೆದ ಗಲಾಟೆಯಲ್ಲಿ ಈರಪ್ಪ ಎಂಬ ರೈತ ಮೃತಪಟ್ಟಿದ್ದ ಪ್ರಕರಣ ಸಂಬಂಧ ನಾಲ್ಕು ಜನ ತಪ್ಪಿತಸ್ಥರು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ ಅವರು ಆದೇಶ ನೀಡಿದ್ದಾರೆ.
ಹನಮಪ್ಪ ಕಾಸನಕಂಡಿ, ಬಸವರಾಜ ಕಾಸನಕಂಡಿ, ಅನ್ನಪೂರ್ಣವ್ವ ಕಾಸನಕಂಡಿ ಹಾಗೂ ಪಾರ್ವತೆವ್ವ ಕಾಸನಕಂಡಿ ಅವರಿಗೆ ನ್ಯಾಯಾಲಯದ ಐದು ವರ್ಷ ಸಾಧಾರಣ ಜೈಲು ಮತ್ತು ₹5000 ದಂಡ ವಿಧಿಸಿದೆ.
ಪಬ್ಲಿಕ್ ಪ್ಯಾಸಿಕ್ಯೂಟರ್ ಎಂ.ಎ.ಪಾಟೀಲ, ನಾಗರಾಜ ಆಚಾರ್, ಸವಿತಾ ಎಂ ಶಿಗ್ಲಿ, ಅಂಬಣ್ಣ ಟಿ, ಮತ್ತು ಬಂಡಿ ಅಪರ್ಣಾ ಎಂ. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.