ADVERTISEMENT

ಕಾರಟಗಿ: ಸಹಸ್ರಾರ್ಜುನ ಮಹಾರಾಜರ ಜಯಂತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 11:23 IST
Last Updated 11 ನವೆಂಬರ್ 2021, 11:23 IST
ಕಾರಟಗಿಯ ಎಸ್‍ಎಸ್‍ಕೆ ನಗರದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿಯ ನಿಮಿತ್ತ ಅವರ ಭಾವಚಿತ್ರಕ್ಕೆ ಗುರುವಾರ  ಪೂಜೆ ಸಲ್ಲಿಸಲಾಯಿತು
ಕಾರಟಗಿಯ ಎಸ್‍ಎಸ್‍ಕೆ ನಗರದಲ್ಲಿ ಸಹಸ್ರಾರ್ಜುನ ಮಹಾರಾಜರ ಜಯಂತಿಯ ನಿಮಿತ್ತ ಅವರ ಭಾವಚಿತ್ರಕ್ಕೆ ಗುರುವಾರ  ಪೂಜೆ ಸಲ್ಲಿಸಲಾಯಿತು   

ಕಾರಟಗಿ: ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ, ಎಸ್‍ಎಸ್‍ಕೆ ತರುಣ ಸಂಘ ಹಾಗೂ ಎಸ್‍ಎಸ್‍ಕೆ ಮಹಿಳಾ ಮಂಡಳ ಆಶ್ರಯದಲ್ಲಿ ಗುರುವಾರ ಸಹಸ್ರಾರ್ಜುನ ಮಹಾರಾಜರ ಜಯಂತಿ ಆಚರಿಸಲಾಯಿತು.

ಪಟ್ಟಣದ ಎಸ್‍ಎಸ್‍ಕೆ ನಗರದಲ್ಲಿ ಎಸ್‌ಎಸ್‌ಕೆ ಸಮಾಜದ ಪ್ರಮುಖರು, ಯುವಕರು, ಮಹಿಳೆಯರು ಸೇರಿ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ಶರಣು ಸಾ.ನಗಾರಿ, ನಾಗರಾಜ್‌ ಚವ್ಹಾಣ ಮಾತನಾಡಿ, ಪ್ರತಿ ವರ್ಷದಂತೆ ಸೋಮವಂಶ ಕ್ಷತ್ರಿಯ ಕುಲ ತಿಲಕ, ಸಹಸ್ರ ಬಾಹು ಸಹಸ್ರಾರ್ಜುನ ಮಹಾರಾಜರ ಜಯಂತಿಯನ್ನು ಸಮಾಜದವರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು. ಮುಂದಿನ ವರ್ಷ ಸರ್ಕಾರದಿಂದಲೇ ಜಯಂತಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೋನುಬಾಯಿ ಸಿಂಘ್ರಿ, ಪ್ರಮುಖರಾದ ತುಳುಜಾರಾಮ ಸಿಂಘ್ರಿ, ಶ್ಯಾಂಸುಂದರ್ ಬದ್ಧಿ, ಕಳಕೂ ಸಾ. ಬಾಕಳೆ, ಹನುಮಂತ ಸಾ. ಕಾಟವಾ. ಗೋಪಾಲ, ಮಂಜುನಾಥ, ಸಾಗರ, ಸುರೇಶ, ಕಳುಕು, ಜಗನ್ನಾಥ, ನಾಗರಾಜ, ಗಂಗಾಬಾಯಿ ಎಚ್. ಕಾಟವಾ, ಜಯಶ್ರೀ ಜಿ. ಬದ್ಧಿ, ಲತಾ ಕೆ. ಬದ್ಧಿ ಸಹಿತ ಸಮಾಜ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.