
ಕನಕಗಿರಿ: ‘ಛಲವಾದಿ ಸಮಾಜದಲ್ಲಿ ಭೂ ರಹಿತರು ಬಹಳಷ್ಟು ಜನರಿದ್ದು ತುಂಬ ಬಡವರಿದ್ದಾರೆ, ಇಂಥವರಿಗೆ ಸರ್ಕಾರದಿಂದ ಭೂ ವಿತರಣೆ ಮಾಡಬೇಕು’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನೀಲಕಂಠ ಬಡಿಗೇರ ಮನವಿ ಸಲ್ಲಿಸಿದರು.
ಅನೇಕ ವರ್ಷಗಳ ಹಿಂದೆ ಛಲವಾದಿ ಸಮಾಜದ 26 ಕುಟುಂಬಗಳು ತಿಪ್ಪನಾಳ ಕೆರೆಯ ಹೊಲವನ್ನು ನಂಬಿ ಜೀವನ ಸಾಗಿಸುತ್ತಿದ್ದರು, ಭೂ ಮಾಲೀಕರು ಕೃಷಿ ಭೂಮಿಯನ್ನು ಕಿತ್ತಿಕೊಂಡಾಗ ಬೀದಿ ಪಾಲಾಗಿ ನ್ಯಾಯೋಚಿತವಾಗಿ ಹೋರಾಟ ಮಾಡಿ ಜೈಲು ಶಿಕ್ಷೆ ಅನುಭವಿಸುವಂತಾಯಿತು. ತುಂಡು ಭೂಮಿ ಇಲ್ಲದೆ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಪ್ರತಿ ಕುಟುಂಬಕ್ಕೆ ಅಂಬೇಡ್ಕರ್ ನಿಗಮದಿಂದ ಕನಿಷ್ಠ ನಾಲ್ಕು ಎಕರೆ ಭೂಮಿ ಒದಗಿಸಬೇಕು ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರು ಒದಗಿಸುವುದು, ಪರಿಶಿಷ್ಟ ಜಾತಿ ಉಪ ಘಟಕ ಯೋಜನೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು. ಸಮುದಾಯ ಭವನಕ್ಕೆ ಹೆಚ್ಚುವರಿ ₹3 ಕೋಟಿ ಅನುದಾನ ನೀಡಬೇಕು, ಅಂಬೇಡ್ಕರ್ ಮೂರ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.