ADVERTISEMENT

ತಾವರಗೇರಾ: ಕನ್ನಡ ರಥಯಾತ್ರೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 7:06 IST
Last Updated 5 ಡಿಸೆಂಬರ್ 2023, 7:06 IST
ತಾವರಗೇರಾ ಪಟ್ಟಣದಲ್ಲಿ ಸೋಮವಾರ ಕನ್ನಡ ರಥಯಾತ್ರೆಯನ್ನು ಸ್ವಾಗತಿಸಲಾಯಿತು
ತಾವರಗೇರಾ ಪಟ್ಟಣದಲ್ಲಿ ಸೋಮವಾರ ಕನ್ನಡ ರಥಯಾತ್ರೆಯನ್ನು ಸ್ವಾಗತಿಸಲಾಯಿತು   

ತಾವರಗೇರಾ: ಪಟ್ಟಣಕ್ಕೆ ಸೋಮವಾರ ಬಂದ ಕನ್ನಡ ರಥಯಾತ್ರೆಯನ್ನು ಅದ್ದೂರಿ ಸ್ವಾಗತ ನೀಡಲಾಯಿತು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಥಯಾತ್ರೆಗೆ ಸ್ವಾಗತ ಕೋರಿದ ತಾಲ್ಲೂಕು ಆಡಳಿತ ವರ್ಗ, ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ನಂತರ ನಡೆದ ಭುವನೇಶ್ವರಿ ಭಾವಚಿತ್ರ ಮತ್ತು ರಥಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿತು.

ವಿವಿಧ ಮಹನಿಯರ ವೇಷಭೂಷಣ ತೊಟ್ಟ ಶಾಲಾ ಮಕ್ಕಳು, ಕುಂಭ–ಕಳಸ ಹೊತ್ತ ಮಹಿಳೆಯರು, ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಶಾಲಾ ಮಕ್ಕಳು ಹಿಡಿದಿದ್ದ ಬೃಹತ್‌ ಉದ್ದದ ಕನ್ನಡ ಭಾವುಟ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಕಸಾಪ ಹೋಬಳಿ ಘಟಕದ ಸದಸ್ಯರು, ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು.

ADVERTISEMENT

ಊಟಕ್ಕೆ ಪರದಾಟ: ಕನ್ನಡ ರಥಯಾತ್ರೆ ಪಾಲ್ಗೊಂಡಿದ್ದ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಊಟ ಸಿಗದೇ ವಾಪಸ್‌ ಮನೆಗೆ ತೆರಳಿದರು. ಸಮರ್ಪಕ ಕುಡಿಯುವ ನೀರು ವ್ಯವಸ್ಥೆ ಮಾಡದ್ದರಿಂದ ಆಕ್ರೋಶಗೊಂಡ ಕನ್ನಡಪರ ಸಂಘಟನೆಯ ಸಿದ್ದನಗೌಡ ಪುಂಡಗೌಡರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜತೆ ವಾಗ್ವಾದ ನಡೆಸಿದರು.

ಮುಖ್ಯಾಧಿಕಾರಿ ನಭೀಸಾಬ ಖುದನ್ನವರ, ನಾಡ ತಹಶೀಲ್ದಾರ್‌ ಶರಣಬಸವೇಶ ಕಳ್ಳಿಮಠ, ಮುಖಂಡ ನಾರಾಯಣಗೌಡ ಮೆದಿಕೇರಿ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ರವಿಂದ್ರ ಬಳಿಗೇರ, ನಿಕಟಪೂರ್ವ ಅಧ್ಯಕ್ಷ ಎಸ್.ಎಸ್.ಅರಳಿ, ಪಟ್ಟಣ ಪಂಚಾಯಿತಿ ಸದಸ್ಯೆ ಬೇಬಿರೇಖಾ, ಅಂಬುಜಾ ಹೂಗಾರ, ಸಾಗರ ಬೇರಿ, ಅಮರೇಶ ಕುಂಬಾರ, ಸಂಜೀವ ಚಲವಾದಿ, ಸಿದ್ದನಗೌಡ, ಚನ್ನಪ್ಪ ನಾಲ್ತಾವಾಡ, ಕಂದಾಯ ಇಲಾಖೆಯ ಸಿಬ್ಬಂದಿ, ನೀಲಕಂಠೇಶ್ವರ ಮಹಿಳಾ ಮಂಡಳಿ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು,ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ನೃತ್ಯ ಪ್ರದರ್ಶಿಸಿದ ಶಾಲಾ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.