ಸೈದಾಪುರ: ಕಾಳೆಬೆಳಗುಂದಿ ಗ್ರಾಮದ ಬಿಬಿಸಿ ಕಲ್ಯಾಣ ಮಂಟಪದಲ್ಲಿ ಯಾದಗಿರಿ ಗ್ರಾಮೀಣ ವಲಯ ಆರ್ಯ ವೈಶ್ಯ ಸ್ವಯಂ ಸೇವಕರ ವತಿಯಿಂದ ಹಮ್ಮಿಕೊಂಡಿದ ಆರ್ಯವೈಶ್ಯ ಸಮಾಜದ ಕುಲದೇವತೆ ಕನ್ನಿಕಾ ಪರಮೇಶ್ವರಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ 8 ಗಂಟೆಗೆ ಮಹಿಳೆಯರ ಕುಂಭಕಳಸದೊಂದಿಗೆ ಕನ್ನಿಕಾ ಪರಮೇಶ್ವರಿಯ ವಿಶೇಷ ಪೂಜೆ ಸಲ್ಲಿಸಲಾಯಿತು. ಸುತ್ತಲಿನ ಗ್ರಾಮದ ಸಮಾಜದವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಬಿಳಿ ಸಮವಸ್ತ್ರದೊಂದಿಗೆ ಭಕ್ತಿಯಿಂದ ಜಯಂತಿಯಲ್ಲಿ ಭಾಗಿ ಆಗಿದ್ದರು.
ಯಾದಗಿರಿ ಗ್ರಾಮೀಣ ವಲಯಾಧ್ಯಕ್ಷ ವೆಂಕೋಬಯ್ಯ ಗುಜ್ಜ, ಉಪಾಧ್ಯಕ್ಷ ಶ್ರೀನಿವಾಸ ಶೆಟ್ಟಿ, ಗುರುರಾಜ ಗುಜ್ಜ, ವೆಂಕಟೇಶ ಪಾಲದಿ, ಸುಭಾಷ ಕಟ್ಟಾ, ಸಿದ್ದು ಕೊಂಕಲ್, ಪ್ರಸಾದ ಹಳ್ಳಿಗೇರಾ, ಶಿವಕುಮಾರ ನೀಲಹಳ್ಳಿ, ಸುನೀಲ ಕಂದಳ್ಳಿ, ಸತೀಶ ಕಟ್ಟಾ, ನರಸಿಂಹ ಬಾಲಛೇಡ, ನಾರಾಯಣ ಶೆಟ್ಟಿ ಗುಡ್ಲಾಗುಂಟ, ಶ್ರೀನಿವಾಸ ಶೆಟ್ಟಿ ಕಣೇಕಲ, ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.