ADVERTISEMENT

ಕೊಪ್ಪಳ: ಕಪ್ಪತ್ತಮಠದ 100ನೇ ರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 7:29 IST
Last Updated 27 ಫೆಬ್ರುವರಿ 2026, 7:29 IST
.
.   

ಕೊಪ್ಪಳ: ತಾಲ್ಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ಗುರುಚನ್ನಬಸವೇಶ್ವರ ಕಪ್ಪತ್ತಮಠದ 100ನೇ ಮಹಾರಥೋತ್ಸವ ಶುಕ್ರವಾರ ಸಂಜೆ 5 ಗಂಟೆಗೆ ನಡೆಯಲಿದೆ.

ಮುಂಡರಗಿಯ ಸಂಸ್ಥಾನಮಠದ ಅನ್ನದಾನೀಶ್ವರ ಸ್ವಾಮೀಜಿ, ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಹಿರೇಸಿಂದೋಗಿಯ ಕಪ್ಪತ್ತಮಠದ ಚಿದಾನಂದ ಸ್ವಾಮೀಜಿ ಸೇರಿದಂತೆ ಅನೇಕರು ಪಾಲ್ಗೊಳ್ಳುವರು.

ಇದೇ ವೇಳೆ ತೋಟಪ್ಪಯ್ಯ ಸ್ವಾಮೀಜಿಯ 56ನೇ ವರ್ಷದ ಪುಣ್ಯದಿನ ಅಂಗವಾಗಿ ಬೆಳಿಗ್ಗೆ 5 ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಧ್ಯಾಹ್ನ ಮಹಾಗಣಾರಾಧನೆ, ಸಂಜೆ 5ಕ್ಕೆ ಮಹಾರಥೋತ್ಸವ ಹಾಗೂ ರಾತ್ರಿ 7.45ಕ್ಕೆ ಧಾರ್ಮಿಕ ಸಮ್ಮೇಳನ ನಡೆಯವುದು. ವಿವಿಧ ಮಠಗಳ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.

ADVERTISEMENT

ಫೆ.28ರಂದು ಸಂಜೆ 7ಕ್ಕೆ ಬನ್ನಿಕೊಪ್ಪದ ಬಸವರಾಜ ಅಡವಳ್ಳಿ ಹಾಗೂ ಇತರರಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.