ADVERTISEMENT

ಕಾರಟಗಿ: ದ್ಯಾವಮ್ಮ ದೇವಿ ಉತ್ಸವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:27 IST
Last Updated 8 ಅಕ್ಟೋಬರ್ 2024, 14:27 IST
ಕಾರಟಗಿಯ ಕೋಟೆ ದ್ಯಾವಮ್ಮ ದೇವಿ ಉತ್ಸವದ ನಿಮಿತ್ತ ಮಂಗಳವಾರ ಪೂರ್ಣಕುಂಭ, ಕಳಸದೊಂದಿಗೆ ಗಂಗೆಸ್ಥಳಕ್ಕೆ ಹೋಗಿಬರಲಾಯಿತು
ಕಾರಟಗಿಯ ಕೋಟೆ ದ್ಯಾವಮ್ಮ ದೇವಿ ಉತ್ಸವದ ನಿಮಿತ್ತ ಮಂಗಳವಾರ ಪೂರ್ಣಕುಂಭ, ಕಳಸದೊಂದಿಗೆ ಗಂಗೆಸ್ಥಳಕ್ಕೆ ಹೋಗಿಬರಲಾಯಿತು   

ಕಾರಟಗಿ: ಪಟ್ಟಣದ ಕೋಟೆ ದ್ಯಾವಮ್ಮ ದೇವಿ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ನಡೆದವು.

ಬೆಳಿಗ್ಗೆ ದ್ಯಾವಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿ, ನೈವೇದ್ಯ ಸಮರ್ಪಣೆ ಕಾರ್ಯಕ್ರಮಗಳು ನಡೆದವು.

ಬಳಿಕ ತುಂಗಭದ್ರಾ ವಿತರಣಾ ನಾಲೆಯ ಬಳಿ ಗಂಗಾಪೂಜೆ ನೆರವೇರಿಸಿ, ಉತ್ಸವದ ಮೆರವಣಿಗೆ ಆರಂಭಗೊಂಡು ರಾಜ್ಯ ಹೆದ್ದಾರಿಯ ಮೂಲಕ ಸಾಗಿ ದೇವಸ್ಥಾನ ತಲುಪಿ ಮುಕ್ತಾಯಗೊಂಡಿತು. ಪೂರ್ಣಕುಂಭ, ಕಳಸ, ಜೋಗತಿಯರ ಅಡ್ಡಲಿಗೆ, ಸಕಲ ವಾದ್ಯಮೇಳಗಳು ಮೆರವಣಿಗೆಯ ಕಳೆ ಹೆಚ್ಚಿಸಿದ್ದವು.

ADVERTISEMENT

ಬಳಿಕ ಸಾರ್ವಜನಿಕ ಅನ್ನಸಂತರ್ಪಣ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.