
ಕಾರಟಗಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ದರ ಇಳಿಸುವ ನಿರ್ಧಾರ ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಕೈಗೊಳ್ಳಬೇಕಾಗಿರುವ ಕೆಲಸಗಳ ಕುರಿತು ಶನಿವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
ಪಟ್ಟಣದ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಹಲವು ಸದಸ್ಯರು ವಾರ್ಡ್‍ಗಳ ಅಭಿವೃದ್ಧಿ ವಿಷಯಗಳನ್ನು ಚರ್ಚೆಗೆ ತಂದರು.
ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಹೇಳಿದ್ದಕ್ಕೆ ಸದಸ್ಯರು ಅನುಮೋದನೆ ನೀಡಿದರು. ಕನಕದಾಸ ವೃತ್ತದಲ್ಲಿ ಕಟ್ಟೆ ನಿರ್ಮಾಣಕ್ಕೆ ಕ್ರಮ, ಪುರಸಭೆ ಕಾಯಂ ನೌಕರ ಜಯಪ್ಪ ಮತ್ತು ಹೊರ ಗುತ್ತಿಗೆ ನೌಕರರ ಚಾಲಕ ಆನಂದ ಅವರ ಆರೋಗ್ಯದ ಚಿಕಿತ್ಸೆಗೆ ವೆಚ್ಚ ಭರಿಸಲು ಕ್ರಮ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಚಳಿಗಾಲದಿಂದ ರಕ್ಷಣದೆಗೆ ಜಾಕೆಟ್ ನೀಡಲು ತೀರ್ಮಾನಿಸಲಾಯತು.
ವಿವಿಧ ವಾರ್ಡ್‌ಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು, ಹೈಮಾಸ್ಟ್ ದೀಪದ ವ್ಯವಸ್ಥೆ, ಬಯಲು ಶೌಚಾಲಯಗಳನ್ನು ತೆರವು ಮಾಡುವುದರ ಬಗ್ಗೆಯೂ ಚರ್ಚೆಯಾಯಿತು. ಕೊನೆಗೆ ಸಭೆಯಲ್ಲಿ ಜಮಾ ಖರ್ಚುಗಳ ಲೆಕ್ಕದ ಅನುಮೋದನೆ ಹಾಗೂ ಮುಂದಿನ ತಿಂಗಳ ಕಾರ್ಯಸೂಚಿಗಳನ್ನೂ ಮಂಡಿಸಲಾಯಿತು.
ಸ್ಥಾಯಿಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಸದಸ್ಯರಾದ ಹಿರೇಬಸಪ್ಪ ಸಜ್ಜನ, ಮಂಜುನಾಥ ಮೇಗೂರು, ದೊಡ್ಡಬಸವರಾಜ ಬೂದಿ, ಶ್ರೀನಿವಾಸ ಕಾನುಮಲ್ಲಿ, ಸುರೇಶ್, ಸೌಮ್ಯ ಕಂದಗಲ್, ಸುಜಾತಾ ನಾಗರಾಜ್, ಪದ್ಮಾವತಿ ನಾಗರಾಜ್, ಮಹಬೂಬ ಬಿ, ಸುರೇಶ್, ವೀರೇಶ ಗದ್ದಿ ಮುದುಗಲ್, ಸಿದ್ದಪ್ಪ ಬೇವಿನಾಳ, ವರಲಕ್ಷ್ಮೀ ನಾಗರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.