ಬಂಧನ
(ಪ್ರಾತಿನಿಧಿಕ ಚಿತ್ರ)
ಕಾರಟಗಿ: ಹೋಟೇಲ್‌ನ ಗ್ಯಾಸ್ ಸಿಲಿಂಡರ್ ಹಾಗೂ ನಗದು ದೋಚಿ, ದಾರಿ ಮಧ್ಯೆ ಬಂದು ಪ್ರಶ್ನಿಸಿದ ಮಾಲೀಕರಿಗೆ ಬೆದರಿಕೆ ಹಾಕಿ, ಜೀವ ತಗೆಯುವ ಬೆದರಿಕೆ ಹಾಕಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಕಾರಟಗಿ ಪೊಲೀಸರು ಭಾನುವಾರ ತಡರಾತ್ರಿ ಬಂಧಿಸಿದ್ದಾರೆ.
ಪಟ್ಟಣದ ಮೊಹ್ಮದ ಹುಸೇನ್, ಸಂತೋಷ ಬಂಧಿತರು. ಆರೋಪಿಗಳು ಇಲ್ಲಿನ ಬ್ರಹ್ಮಲಿಂಗೇಶ್ವರ ಹೋಟೇಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ₹2ಸಾವಿರ ನಗದು ದೋಚಿ ಬಸ್ ನಿಲ್ದಾಣ ಬಳಿ ನಿಂತಿದ್ದರು. ಸುಳಿವು ಹಿಡಿದ ಮಾಲೀಕ ಮಾರುತಿ ಬೇನಳ್ಳಿ ಬೆನ್ನತ್ತಿ ಪ್ರಶ್ನಿಸಿದರು. ಮಾಲೀಕರಿಗೆ ಕೈಯಿಂದ ದಬ್ಬಿ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಬಲೆ ಬೀಸಿದ ಪೋಲೀಸರು ಇಬ್ಬರನ್ನೂ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಹಿಂದೆ ಕಳ್ಳತನ: ಆರೋಪಿತರು ಹಿಂದೆ ಕಳ್ಳತನ ಮಾಡಿ ರೈಲ್ವೆ ನಿಲ್ದಾಣ ಬಳಿ ಗೋದಾಮು ಹಿಂದೆ ಇಟ್ಟಿದ್ದ 10 ಗ್ಯಾಸ್ ಸಿಲಿಂಡರ್ ಹಾಗೂ 2 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಹೋಟೇಲ್ ಮಾಲೀಕ ಮಾರುತಿ ಬೇನಳ್ಳಿ ನೀಡಿದ ದೂರಿನನ್ವಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಕಾಮಣ್ಣ ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.