ADVERTISEMENT

ಕೊಪ್ಪಳ | ಪತ್ನಿ ಪ್ರತಿಮೆ ಪ್ರತಿಷ್ಠಾಪಿಸಿ ಗೃಹ ಪ್ರವೇಶ ಮಾಡಿದ ಉದ್ಯಮಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 7:16 IST
Last Updated 11 ಆಗಸ್ಟ್ 2020, 7:16 IST
ಪತ್ನಿಯ ಮೂರ್ತಿಗೆ ಅಲಂಕಾರ ಮಾಡುತ್ತಿರುವ ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ ಹಾಗೂ ಅವರ ಮಕ್ಕಳು
ಪತ್ನಿಯ ಮೂರ್ತಿಗೆ ಅಲಂಕಾರ ಮಾಡುತ್ತಿರುವ ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ ಹಾಗೂ ಅವರ ಮಕ್ಕಳು   
""
""

ಕೊಪ್ಪಳ: ಸಮೀಪದ ಭಾಗ್ಯನಗರ ಪಟ್ಟಣದ ಉದ್ಯಮಿಯೊಬ್ಬರು ಗೃಹ ಪ್ರವೇಶಕ್ಕೆ ಪತ್ನಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.

ಉದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ಕೆ.ವಿ.ಎನ್. ಮಾಧವಿ ಅವರು ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಸವಿನೆನಪಿಗಾಗಿ ಪತಿ ಶ್ರೀನಿವಾಸ ಗುಪ್ತಾ ಪುತ್ಥಳಿ ನಿರ್ಮಿಸಿದ್ದಾರೆ.

ಭಾಗ್ಯನಗರದ ರೈಲ್ವೆ ನಿಲ್ಧಾಣ ಬಳಿಯ ಗುಪ್ತಾ ಅಪಾರ್ಟ್ಮೆಂಟ್ ಆವರಣದಲ್ಲಿ ಮನೆ ನಿರ್ಮಿಸಬೇಕು ಎಂಬುದು ಪತ್ನಿಯ ಬಯಕೆಯಾಗಿತ್ತು. ಅವರ ಆಸೆ ಪ್ರಸ್ತುತ ಪತಿ ಈಡೇರಿಸಿದ್ದು, ಆದರೆ ಅದನ್ನು ನೋಡಲು ಪತ್ನಿ ಇಲ್ಲದಿದರುವುದರಿಂದ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಮೂಲಕ ಅವರ ನೆನಪನ್ನು ಜೀವಂತವಾಗಿದ್ದಾರೆ.

ADVERTISEMENT

ಬೆಂಗಳೂರು ಗೊಂಬೆ ಮನೆಯಲ್ಲಿ ಸಿಲಿಕಾನ್ ಇಂಪೋರ್ಟೆಡ್ ಮಟಿರಿಯಲ್ ಬಳಸಿ ಪ್ರತಿಮೆ ತಯಾರಿಸಲಾಗಿದೆ. ಸುಮಾರು 15 ರಿಂದ 20 ಕೆಜಿ ತೂಕ ಹೊಂದಿರುವ ಈ ಪ್ರತಿಮೆಯನ್ನು ಒಂದು ವರ್ಷದ ಅವಧಿಯಲ್ಲಿ ₹ 10 ಲಕ್ಷ ವೆಚ್ಚದೊಂದಿಗೆ ಶಿಲ್ಪಿ ಶ್ರೀಧರಮೂರ್ತಿ ತಯಾರಿಸಿದ್ದಾರೆ.

ಪ್ರತಿಮೆ ನಿರ್ಮಿಸಿರುವುದು ಮಕ್ಕಳಿಗೂ ಸಂತಸ ತಂದಿದೆ. ಅಲ್ಲದೇ ಪ್ರತಿಮೆಯನ್ನು ಕಂಡ ತಕ್ಷಣ ಆತ್ಮತೃಪ್ತಿ ನೀಡುತ್ತದೆ ಎನ್ನುತ್ತಾರೆ ಶ್ರೀನಿವಾಸ ಗುಪ್ತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.