ADVERTISEMENT

ಗಂಗಾವತಿ: ಕೆರೆಯಲ್ಲಿ ಮುಳುಗಿ ಕೇರಳ ಪ್ರವಾಸಿಗ ಸಾವು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:32 IST
Last Updated 20 ಡಿಸೆಂಬರ್ 2025, 5:32 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಗಂಗಾವತಿ: ತಾಲ್ಲೂಕಿನ ಸಾಣಾಪುರ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಕೇರಳದಿಂದ ಬಂದಿದ್ದ ಪ್ರವಾಸಿಗ ಮುಳುಗಿ ಶುಕ್ರವಾರ ಮೃತಪಟ್ಟಿದ್ದಾನೆ.

ADVERTISEMENT

ಪ್ರವಾಸಕ್ಕಾಗಿ ಬಂದಿದ್ದ ಶೈರಿಲ್‌ ಜೋಶ್‌ (34) ಒಂದು ದಿನ ಬಸಾಪುರದಲ್ಲಿ ವಾಸವಾಗಿ, ಡಿ. 17ರಂದು ತಾಣಗಳ ಸುತ್ತಾಟಕ್ಕೆ ಹೊರಗಡೆ ಹೋಗಿದ್ದಾಗ ನಾಪತ್ತೆಯಾಗಿದ್ದರು. ಈ ಕುರಿತು ಮುನಿರಾಬಾದ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ದಿನಗಳ ನಿರಂತರ ಕಾರ್ಯಾಚರಣೆ  ಬಳಿಕ ಶುಕ್ರವಾರ ಸಾಣಾಪುರ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.