ADVERTISEMENT

ಕೊಪ್ಪಳ | ಅಕ್ರಮವಾಗಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ಸಂಗ್ರಹ: ಅಧಿಕಾರಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 8 ಮೇ 2021, 9:18 IST
Last Updated 8 ಮೇ 2021, 9:18 IST

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದ ಎರಡು ಖಾಸಾಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಬಳಸುವ ರೆಮ್ ಡಿಸಿವರ್ ಚುಚ್ಚು ಮದ್ದು ಅಕ್ರಮವಾಗಿ ಸಂಗ್ರಹಿಸಿ ಬಳಕೆ ಮಾಡಲಾಗುತ್ತಿದೆ ಎನ್ನುವ ದೂರಿನ ಮೇಲೆ ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ನೇತೃತ್ವದ ತಂಡ ಶುಕ್ರವಾರ ರಾತ್ರಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ಕಂಪ್ಲಿ ರಸ್ತೆಯಲ್ಲಿರುವ ಸಿಟಿ ಕ್ಲಿನಿಕ್ ಗೆ ದಾಖಲಾದ ಕೋವಿಡ್ ರೋಗಿಯನ್ನು ಪಕ್ಕದ ನಿಶಾ ವಸತಿ ಗೃಹದಲ್ಲಿಯ ಕೊಠಡಿಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಜೊತೆಗೆ ರೋಗಿಗೆ ಪರವಾನಿಗೆ ಇಲ್ಲದೆ ರೆಮ್ ಡಿಸಿವರ್ ಇಂಜಕ್ಷನ್ ನೀಡಲಾಗುತ್ತಿತ್ತು.

ADVERTISEMENT

ಅದೇ ರೀತಿಯಾಗಿ ಚಂದ್ರಪ್ಪ ಆಸ್ಪತ್ರೆ ಮೇಲೆ ಕೂಡ ದಾಳಿ ನಡೆಸಿ. ಒಟ್ಟು ನಗರದಲ್ಲಿ ಡೋಸ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆಸ್ಪತ್ರೆಯ ಔಷಧ ಅಂಗಡಿಗಳನ್ನು ಸೀಜ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.