ADVERTISEMENT

ಕೊಪ್ಪಳ: ಕಾಲುವೆಗೆ ಹಾರಿದ್ದ ಪ್ರೇಮಿಗಳು ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 7:21 IST
Last Updated 11 ಜುಲೈ 2025, 7:21 IST
   

ಕೊಪ್ಪಳ: ಪ್ರೇಮಿಗಳಾದ ತಾಲ್ಲೂಕಿನ ಹೊಸ ಲಿಂಗಾಪುರ ಗ್ರಾಮದ ಪ್ರವೀಣ ಹಾಗೂ ಗಂಗಾವತಿ ತಾಲ್ಲೂಕಿನ ಸಾಣಾಪುರದ ಅಂಜಲಿ ಎನ್ನುವವರು ಬುಧವಾರ ತುಂಗಭದ್ರಾ ಎಡದಂಡೆ ಕಾಲುವೆಗೆ ಹಾರಿದ್ದರು. ಅವರ ಮೃತದೇಹಗಳು ಶುಕ್ರವಾರ ಶಿವಪುರದ ಕೆರೆ (ಬೋರಕಾ ವಿದ್ಯುತ್ ಉತ್ಪಾದನಾ ಕೇಂದ್ರದ ಬಳಿ) ಪತ್ತೆಯಾಗಿವೆ.

ಈ ಯುವ ಪ್ರೇಮಿಗಳು ಕೂಡಿ ಬದುಕಲು ಊರು ತೊರೆದು ಹೋಗಿದ್ದರು. ಪ್ರವೀಣ ಅವರನ್ನು ಮರಳಿ ಕರೆತರಲು ಅವರ ತಾಯಿ ಮನವೊಲಿಸಿ ಕಾರು ಕಳುಹಿಸಿದ್ದರು. ಊರಿಗೆ ವಾಪಸ್ ಬರುತ್ತಿದ್ದಾಗ ಪ್ರೇಮಿಗಳು ಶೌಚಾಲಯಕ್ಕೆ ಹೋಗುವುದಾಗಿ ಕಾರು ಚಾಲಕನಿಗೆ ತಿಳಿಸಿ ಕಾಲುವೆಗೆ ಹಾರಿದ್ದರು.

ಯುವತಿಯ ಧರಿಸಿದ್ದ ವೇಲ್ ಇಬ್ಬರೂ ಕೈಗೆ ಕಟ್ಟಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಎರಡು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಈ ಕುರಿತು ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.