ADVERTISEMENT

ಕರ್ತವ್ಯ ಲೋಪ: ಪ್ರಾಂಶುಪಾಲ ಸೇರಿ ಇಬ್ಬರ ಅಮಾನತು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:24 IST
Last Updated 28 ಫೆಬ್ರುವರಿ 2026, 7:24 IST
<div class="paragraphs"><p>ಅಮಾನತು</p></div>

ಅಮಾನತು

   

ಕೊಪ್ಪಳ: ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಜಿಲ್ಲೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಂಶುಪಾಲ ಹನುಮೇಶ್‌ ಹಾಗೂ ನಿಲಯ ಪಾಲಕಿ ಭಾರತಿ ಅವರನ್ನು ಶುಕ್ರವಾರ ಅಮಾನತು ಮಾಡಲಾಗಿದೆ.

ಆ ವಸತಿ ಶಾಲೆಯೊಂದರ ಬಾಲಕಿ ಮೇಲೆ ಈಚೆಗೆ ಲೈಂಗಿಕ ದೌರ್ಜನ್ಯವಾಗಿತ್ತು. ಈ ಕುರಿತು ಬಾಲಕಿ ನೀಡಿದ ದೂರಿನನ್ವಯ ಬಾಲಕಿ ಸಂಬಂಧಿಕರ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಸಾರ್ವಜನಿಕವಾಗಿ ದೂರುಗಳು ಕೂಡ ಬಂದಿದ್ದವು. ಈ ಕುರಿತು ಮಾಹಿತಿ ಒದಗಿಸುವಂತೆ ಹನುಮೇಶ್ ಹಾಗೂ ಭಾರತಿ ಅವರಿಗೆ ಮೇಲಧಿಕಾರಿಗಳು ಅನೇಕ ಬಾರಿ ಕೇಳಿದ್ದರೂ ಮಾಹಿತಿ ಒದಗಿಸಿರಲಿಲ್ಲ. ಶಾಲೆಯಲ್ಲಿ ಬಾಲಕಿಗೆ ಋತುಚಕ್ರದ ಸಮಸ್ಯೆಯಿಂದಾಗಿ ರಕ್ತಸ್ರಾವ ಆಗಿತ್ತು ಎಂದಷ್ಟೇ ಹೇಳಿಕೆ ನೀಡಿ ಬೇಜವಾಬ್ದಾರಿತನ ತೋರಿರುವುದರಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.