ಯಲಬುರ್ಗಾ: ತಾಲ್ಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತೊಂಡಿಹಾಳ ಮತ್ತು ಬಂಡಿಹಾಳ ಗ್ರಾಮಗಳನ್ನು ಒಳಗೊಂಡ ವಿದ್ಯಾರ್ಥಿಗಳಿಗೆ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ ಮಾತನಾಡಿ, ‘ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಹಾಗೂ ಕಲಿಕಾ ಸಾಮರ್ಥ್ಯ ವೃದ್ಧಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಇಂತಹ ಕಾರ್ಯಾಗಾರಗಳು ಹೆಚ್ಚೆಚ್ಚು ನಡೆಯಬೇಕು. ನುರಿತ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವುದರಿಂದ ಮಕ್ಕಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ಶಾಲಾಭಿವೃದ್ಧಿ ಅಧ್ಯಕ್ಷ ಗೌಡಪ್ಪ ಬಲಕುಂದಿ ಮಾತನಾಡಿ, ‘ಗಣಿತ ವಿಷಯವೇ ಪ್ರತಿಯೊಂದಕ್ಕೂ ಮೂಲಾಧಾರ. ಯಾರು ಗಣಿತದಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದುತ್ತಾರೆಯೋ ಅವರು ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಸಾಧನೆ ಮಾಡಬಲ್ಲರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಣಿತಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ಕೊಡಬೇಕು’ ಎಂದರು.
ಕರಮುಡಿ, ಬಂಡಿಹಾಳ, ತೊಂಡಿಹಾಳ ಗ್ರಾಮದಿಂದ ಒಟ್ಟು 150ಕ್ಕು ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ, ಮುಖಂಡ ಗಂಗಪ್ಪ ಹವಳಿ ಮಾತನಾಡಿದರು. ಗ್ರಾ.ಪಂ.ಸದಸ್ಯ ರಾಮಣ್ಣ ಹೊಕ್ಕಳದ, ಮೈಲಾರಪ್ಪ ಪಲ್ಲೇದ, ಶಿಕ್ಷಕರಾದ ಹನುಮಪ್ಪ ಬಂಡಿಹಾಳ, ತಿರುಗಣೆಪ್ಪ ದೇವಕ್ಕಿ, ಜಗದೀಶಪ್ಪ ಅಂಗಡಿ, ಹನುಮಪ್ಪ ತಳವಾರ, ಮುತ್ತಣ್ಣ ಬಡಿಗೇರ, ಪ್ರಸನ್ನ ಉಳ್ಳಾಗಡ್ಡಿ, ಮಂಜುನಾಥ ರಾಂಪುರ, ರಾಜೇಶ್ವರಿ, ವಿಜಯಲಕ್ಷ್ಮಿ ಬಂಡಿಹಾಳ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.