ADVERTISEMENT

ಶೇಂಗಾ ಚಕ್ಕಿ ಘಟಕ ಸ್ಥಳಾಂತರಿಸಿ; ನಗರಸಭೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:48 IST
Last Updated 23 ಜನವರಿ 2026, 7:48 IST
ಕೊಪ್ಪಳದ ಆಶ್ರಯ ಕಾಲೊನಿ ಸಮೀಪದಿಂದ ಹೊರಬರುತ್ತಿರುವ ಹೊಗೆ
ಕೊಪ್ಪಳದ ಆಶ್ರಯ ಕಾಲೊನಿ ಸಮೀಪದಿಂದ ಹೊರಬರುತ್ತಿರುವ ಹೊಗೆ   

ಕೊಪ್ಪಳ: ‘ಮನೆಗಳು ಇರುವ ಸಮೀಪದಲ್ಲಿಯೇ ವ್ಯಕ್ತಿಯೊಬ್ಬ ಶೇಂಗಾ ಚಕ್ಕಿ ತಿನಿಸು ತಯಾರಿಕಾ ಘಟಕ ನಡೆಸುತ್ತಿದ್ದು, ಇದರಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಈ ಕುರಿತು ಕ್ರಮ ವಹಿಸಬೇಕು’ ಎಂದು ನಗರದ ಆಶ್ರಯ ಕಾಲೊನಿ ವ್ಯಾಪ್ತಿಯ ಮೆಹಬೂಬನಗರದ ನಿವಾಸಿಗಳು ನಗರಸಭೆಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

‘ಘಟಕದಿಂದ ಸ್ಥಳೀಯ ನಿವಾಸಿಗಳಿಗೆ ಅತಿಯಾದ ವಾಸನೆ ಹಾಗೂ ಹೊಗೆ ಬರುತ್ತಿದ್ದು, ಇದರಿಂದ ಮಕ್ಕಳು ಮತ್ತು ವಯೋವೃದ್ಧರ ಮೇಲೆ ವ್ಯಾಪಕ ಪರಿಣಾಮವಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಘಟಕವನ್ನು ಸ್ಥಳಾಂತರಿಸಲು ಸಂಬಂಧಿಸಿದ ವ್ಯಕ್ತಿಗಳಿಗೆ ಸೂಚಿಸಬೇಕು. ಇಲ್ಲವಾದರೆ ನಿವಾಸಿಗಳು ಕೆಟ್ಟ ದೂಳಿನಲ್ಲಿಯೇ ಬದುಕಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT