ADVERTISEMENT

ಕೊಪ್ಪಳ: ವ್ಯಾಪಕ ಮಳೆ: ಬೆಳೆ, ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 14:34 IST
Last Updated 30 ಸೆಪ್ಟೆಂಬರ್ 2022, 14:34 IST
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ಯಶೋಮಾರ್ಗ ಫೌಂಡೇಷನ್‌ ಅಭಿವೃದ್ಧಿಪಡಿಸಿದ ಕೆರೆ ಕೋಡಿ ಬಿದ್ದಿರುವುದು
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ಯಶೋಮಾರ್ಗ ಫೌಂಡೇಷನ್‌ ಅಭಿವೃದ್ಧಿಪಡಿಸಿದ ಕೆರೆ ಕೋಡಿ ಬಿದ್ದಿರುವುದು   

ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ವ್ಯಾಪಕ ಮಳೆಯಾಗಿದ್ದು ಮನೆ ಹಾಗೂ ಬೆಳೆಗಳಿಗೆ ಹಾನಿಯಾಗಿದೆ.

ಯಲಬುರ್ಗಾ ತಾಲ್ಲೂಕಿನಲ್ಲಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 53 ಮನೆಗಳಿಗೆ ಹಾನಿಯಾಗಿದೆ. ರಾಜ್ಯದಲ್ಲಿ ಒಂದೇ ದಿನ ಹೆಚ್ಚು ಮಳೆ ಸುರಿದ ಮೊದಲ ಮೂರು ಊರುಗಳ ಪಟ್ಟಿಯಲ್ಲಿ ಕೊಪ್ಪಳ ತಾಲ್ಲೂಕಿನ ಹಿಟ್ನಾಳ (10.06 ಸೆಂ.ಮೀ), ಬೇವಿನಹಳ್ಳಿ (10.04 ಸೆಂ.ಮೀ) ಇವೆ. ಮೊದಲ ಸ್ಥಾನದಲ್ಲಿ ರೋಣ ತಾಲ್ಲೂಕಿನ ಕುಂಟೋಜಿ (10.08 ಸೆಂ.ಮೀ.) ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಪ್ಪಳ ತಾಲ್ಲೂಕಿನ ಬಹದ್ದೂರ್‌ ಬಂಡಿ ವ್ಯಾಪ್ತಿಯಲ್ಲಿ ಮೆಕ್ಕೆತೆನೆ ಹೊಲಗಳಿಗೆ ಮಳೆ ನೀರು ನುಗ್ಗಿದ್ದು ಕಟಾವಿಗೆ ಕಾದಿದ್ದ ರೈತರು ಸಂಕಷ್ಟ ಎದುರಿಸುವಂತಾಗಿದೆ.

ADVERTISEMENT

ಕೋಡಿ ಬಿದ್ದ ಕೆರೆ: ನಟ ಯಶ್‌ ತಮ್ಮ ಯಶೋಮಾರ್ಗ ಫೌಂಡೇಷನ್‌ ಮೂಲಕ ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ಅಭಿವೃದ್ಧಿ ಪಡಿಸಿದ್ದ ಕೆರೆ ಎಂಟು ವರ್ಷಗಳ ಬಳಿಕ ಕೋಡಿ ಹರಿದಿದ್ದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.