ಕೊಪ್ಪಳ: ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವ ಕಾರಣ ತಾಲ್ಲೂಕಿನ ಹಳೆ ಗೊಂಡಬಾಳ ಗ್ರಾಮದಲ್ಲಿ ಮುತೈದೆಯರು ಮಂಗಳವಾರ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು. ‘ನಮ್ಮೂರಿಗೆ ಬಂದು ಹಾನಿ ಪಡಿಸಬೇಡ; ಸಾಕು ಮುಂದೆ ಹೋಗು’ ಎಂದು ಪ್ರಾರ್ಥಿಸಿಕೊಂಡರು.
ತಾಲ್ಲೂಕಿನ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಟ್ಟಿದ್ದರಿಂದ ಹಲವು ಗ್ರಾಮಗಳಿಗೆ ನೀರು ಹೊಕ್ಕಿದ್ದು ಇದರಿಂದ ತುಂಗಭದ್ರಾ ನದಿ ಪಾತ್ರದ ಹಿನ್ನಿರಿನಲ್ಲಿ ಪ್ರವಾಹದ ಆತಂಕ ಮೂಡಿದೆ. ಹೀಗಾಗಿ ಅಲ್ಲಿನ ಜನ ಹಿರೇಹಳ್ಳದ ನೀರು ತಮ್ಮೂರಿಗೆ ಬರಬಾರದು ಎಂದು ಪೂಜೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.