ADVERTISEMENT

ಕೊಪ್ಪಳ‌ ಜಿಲ್ಲೆಯಾದ್ಯಂತ ಮಳೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 3:58 IST
Last Updated 28 ಜುಲೈ 2022, 3:58 IST
ಕೊಪ್ಪಳ ‌ಜಿಲ್ಲೆಯ ತಾವರಗೇರಾದಲ್ಲಿ ಗುರುವಾರ ಬೆಳಿಗ್ಗೆ ಮೂಡಿದ್ದ ಕಾಮನಬಿಲ್ಲಿನ ಚಿತ್ತಾರ
ಕೊಪ್ಪಳ ‌ಜಿಲ್ಲೆಯ ತಾವರಗೇರಾದಲ್ಲಿ ಗುರುವಾರ ಬೆಳಿಗ್ಗೆ ಮೂಡಿದ್ದ ಕಾಮನಬಿಲ್ಲಿನ ಚಿತ್ತಾರ   

ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಜಿಟಿಜಿಟಿಯಾಗಿ ಮಳೆ ಸುರಿದಿದೆ.

ಬುಧವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ಮೋಡವಾಗಿ ರಾತ್ರಿ ವೇಳೆ‌‌ ಮಳೆ ಸುರಿದಿದೆ.

ಜಿಲ್ಲೆಯ ಹುಲಿಹೈದರ ವ್ಯಾಪ್ತಿಯಲ್ಲಿ 9.4 ಮಿ.ಮೀ, ಕುಷ್ಟಗಿಯಲ್ಲಿ 4‌ಮಿ.ಮೀ. ಗಂಗಾವತಿಯಲ್ಲಿ 9.6 ಮಿ.ಮೀ. ಮಳೆಯಾಗಿದೆ. ಅತಿಯಾದ ತೇವಾಂಶದಿಂದ ಕುಷ್ಟಗಿ ಹಾಗೂ‌ ಹನುಮಸಾಗರ ಭಾಗದಲ್ಲಿ ಬೆಳೆಗಳಿಗೆ ಕೊಳೆ ರೋಗ ಅಂಟಿಕೊಂಡಿದೆ.

ADVERTISEMENT

ಕುಷ್ಟಗಿ ಹಾಗೂ ಕನಕಗಿರಿ ಭಾಗದಲ್ಲಿ ಗುರುವಾರಬೆಳಗಿನ ಜಾವ ಸಾಧಾರಣವಾಗಿ ಮಳೆಯಾಗಿದ್ದು, ಎಂಟು ಗಂಟೆ ನಂತರ ಬಿಡುವು ನೀಡಿದೆ. ತಾವರಗೇರಾದಲ್ಲಿ ಜೋರು‌ ಮಳೆಯಾದರೆ, ಗಂಗಾವತಿಯಲ್ಲಿ ಬೆಳಿಗ್ಗೆ 5 ಗಂಟೆಯಿಂದ ಸುಮಾರು ಒಂದು ತಾಸು‌ ಮಳೆ‌ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.