ADVERTISEMENT

ಕುಕನೂರು: ಕರಕುಶಲ ವಸ್ತು ತಯಾರಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:18 IST
Last Updated 2 ಮಾರ್ಚ್ 2020, 10:18 IST
ಕುಕನೂರಿನ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಗೊಂಬೆಗಳನ್ನು ಪ್ರದರ್ಶಿಸಲಾಯಿತು
ಕುಕನೂರಿನ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಗೊಂಬೆಗಳನ್ನು ಪ್ರದರ್ಶಿಸಲಾಯಿತು   

ಕುಕನೂರು: ಬಳಕೆಯಾಗದ ವಸ್ತುಗಳನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುವ ಮೂಲಕ ಸೃಜನಶೀಲತೆಯನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂದು ಮುಖ್ಯಶಿಕ್ಷಕ ಸೋಮಶೇಖರ ನಿಲೋಗಲ್ ಹೇಳಿದರು.

ಇಲ್ಲಿನ ವಿದ್ಯಾನಂದ ಗುರುಕುಲ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ‘ಕರಕುಶಲ ವಸ್ತುಗಳ ತಯಾರಿಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶಾಲೆಯಲ್ಲಿ ನಡೆಯುವ ವಾರ್ಷಿಕೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಬಳಸಬಹುದಾದ ಪರಿಕರಗಳನ್ನು ತಯಾರಿಸುವ ವಿಧಾನವನ್ನು ಕರಕುಶಲ ತರಗತಿಯಲ್ಲಿ ಶಿಕ್ಷಕರ ಜತೆಗೂಡಿ ಕಲಿಯುತ್ತಾರೆ.

ಥರ್ಮಾಕೋಲ್, ರಬ್ಬರ್, ಪ್ಲಾಸ್ಟಿಕ್, ಪೇಪರ್ ಹಾಗೂ ವಿವಿಧ ಬಣ್ಣಗಳನ್ನು ಬಳಸಿಕೊಂಡು ವಿವಿಧ ಬಗೆಯ ಹೂಗಳು, ಬಳೆಗಳು, ಗೊಂಬೆಗಳು, ಕಂಸಾಳೆ, ತ್ರಿಶೂಲ, ಖಡ್ಗ, ಪೇಟ, ತಮಟೆ, ಟೋಪಿಗಳನ್ನು ಕಲಾತ್ಮಕವಾಗಿ ತಯಾರಿಸಿಕೊಳ್ಳುತ್ತಾರೆ. ಸಣ್ಣಮಕ್ಕಳಿಗೆ ಚಿಟ್ಟೆ, ದೋಣಿ, ಟೋಪಿ, ಬೊಂಬೆಗಳನ್ನು ತಯಾರು ಮಾಡಲು ಹೇಳಿಕೊಡುತ್ತಾರೆ ಎಂದರು.

ADVERTISEMENT

‘ಮಕ್ಕಳಿಗೆ ಬಾಲ್ಯದಿಂದಲೇ ರಾಷ್ಟ್ರನಾಯಕರು ಹಾಗೂ ಅವರ ಸಾಧನೆ ಬಗ್ಗೆ ತಿಳಿಸಿಕೊಡುವ ಸಲುವಾಗಿ ಅವರು ಬಳಸುತ್ತಿದ್ದ ವಸ್ತುಗಳನ್ನು ಮಕ್ಕಳಿಂದಲೇ ತಯಾರಿಸಲಾಗುತ್ತದೆ. ಇದು ಅವರಲ್ಲಿ ಸೃಜನಶೀಲತೆ ಬೆಳೆಯಲು ಸಹಕಾರಿಯಾಗಿದೆ’ ಎಂದು ಮುಖ್ಯಶಿಕ್ಷಕ ಸೋಮಶೇಖರ ಹೇಳಿದರು..

‘ಥರ್ಮಾಕೋಲ್ ಹಾಗೂ ಇತರ ವಸ್ತುಗಳನ್ನು ಕತ್ತರಿಯ ಮೂಲಕ ಕತ್ತರಿಸಿ ವಸ್ತುಗಳನ್ನು ತಯಾರಿಸುವಾಗ ಮಕ್ಕಳು ತುಂಬಾ ಆಸಕ್ತಿಯಿಂದ ಆಲಿಸುತ್ತಾರೆ’ ಎಂದು ಶಿಕ್ಷಕ ರಾಜು ಪೂಜಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.