ADVERTISEMENT

ಕುಷ್ಟಗಿ: ಒತ್ತುವರಿ ತೆರವಿಲ್ಲದೆ ರಸ್ತೆ ಕಾಮಗಾರಿ; ಆಕ್ಷೇಪ

ರಸ್ತೆ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಪುರಸಭೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:42 IST
Last Updated 21 ಫೆಬ್ರುವರಿ 2026, 4:42 IST
<div class="paragraphs"><p>ಕುಷ್ಟಗಿ 5ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡಗಳು</p></div>

ಕುಷ್ಟಗಿ 5ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡ್ಡಲಾಗಿರುವ ಕಟ್ಟಡಗಳು

   

ಕುಷ್ಟಗಿ: ಪಟ್ಟಣದ 5ನೇ ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿರುವ ಒತ್ತುವರಿ ತೆರವುಗೊಳಿಸದೆ ಪುರಸಭೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2024-25ನೇ ಹಣಕಾಸು ವರ್ಷದ ₹15 ಲಕ್ಷ ಅನುದಾನದಲ್ಲಿ ಕೆಆರ್‌ಐಡಿಎಲ್‌ ಏಜೆನ್ಸಿ ಕಾಂಕ್ರೀಟ್‌ ಮೂಲಕ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ. ಈಗಾಗಲೇ ಒಂದಷ್ಟು ಕೆಲಸ ನಡೆಸಲಾಗಿದ್ದು ರಸ್ತೆಗೆ ಅಡ್ಡಲಾಗಿರುವ ಒತ್ತುವರಿ ತೆರವುಗೊಳಿಸದೆ ಕಾಟಾಚಾರಕ್ಕೆ ಕಾಮಗಾರಿ ಮುಗಿಸಿ ಕೈತೊಳೆದುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ವಾರ್ಡ್‌ನ ನಿವಾಸಿ ಆರೋಪ.

ADVERTISEMENT

ಮನವಿ: ಈ ಮಧ್ಯೆ ರಸ್ತೆ ಜಾಗ ಅತಿಕ್ರಮಗಣ ತೆರವುಗೊಳಿಸದೆ ಕೆಲಸ ಮುಂದುವರೆಸದಂತೆ ಸಾರ್ವಜನಿಕರು ಪುರಸಭೆಗೆ ಒತ್ತಾಯಿಸಿದ್ದು ಈ ಕುರಿತು ಗುರುವಾರ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಾಹಿತಿಗೆ ಸಂಪರ್ಕಿಸಿದರೆ ಮುಖ್ಯಾಧಿಕಾರಿ ಕರೆ ಸ್ವೀಕರಿಸಲಿಲ್ಲ.

ಈ ವಿಷಯ ಕುರಿತು ವಿವರಿಸಿದ ಕೆಆರ್‌ಐಡಿಎಲ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇರ್ಫಾನ್‌, ಒತ್ತುವರಿ ತೆರವಿಗೆ ಜನರು ಒತ್ತಾಯಿಸಿದ್ದು ಈ ವಿಷಯವನ್ನು ಪುರಸಭೆ ಗಮನಕ್ಕೆ ತರಲಾಗಿದೆ. ಪುರಸಭೆಯವರು ರಸ್ತೆ ಅಭಿವೃದ್ಧಿಗೆ ಅಗತ್ಯವಾಗಿರುವ ರಸ್ತೆ ಜಾಗವನ್ನು ಗುರುತಿಸಬೇಕಾಗುತ್ತದೆ. ಹಾಗಾಗಿ ಅಲ್ಲಿಯ ವರೆಗೂ ಕೆಲಸ ಸ್ಥಗಿತಗೊಳಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಸ್ತೆ ಅತಿಕ್ರಮಣ ತೆರವಿಗೆ ಒತ್ತಾಯಿಸಿ ಸಾರ್ವಜನಿಕರು ಪುರಸಭೆಗೆ ಮನವಿ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.