ADVERTISEMENT

ನೂತನ ರೈಲು ಸಂಚಾರ: ಯಲಬುರ್ಗಾ ನಿಲ್ದಾಣದಲ್ಲಿ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 14:24 IST
Last Updated 16 ಮೇ 2025, 14:24 IST
ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿರುವ ರೈಲು ನಿಲ್ದಾಣದಲ್ಲಿ ವಿವಿಧ ಪಕ್ಷದ ರಾಜಕೀಯ ಮುಖಂಡರು ಹಾಗೂ ಪಟ್ಟಣದ ನಿವಾಸಿಗರು ನೂತನ ರೈಲು ಪ್ರವೇಶಿಸುತ್ತಿದ್ದಂತೆ ಸಂಭ್ರಮಿಸಿದರು 
ಯಲಬುರ್ಗಾ ಪಟ್ಟಣದ ಹೊರವಲಯದಲ್ಲಿರುವ ರೈಲು ನಿಲ್ದಾಣದಲ್ಲಿ ವಿವಿಧ ಪಕ್ಷದ ರಾಜಕೀಯ ಮುಖಂಡರು ಹಾಗೂ ಪಟ್ಟಣದ ನಿವಾಸಿಗರು ನೂತನ ರೈಲು ಪ್ರವೇಶಿಸುತ್ತಿದ್ದಂತೆ ಸಂಭ್ರಮಿಸಿದರು    

ಯಲಬುರ್ಗಾ: ಬಹುನಿರೀಕ್ಷಿತ ಗದಗ-ವಾಡಿ ನೂತನ ರೈಲು ಮಾರ್ಗದಲ್ಲಿ ಕುಷ್ಟಗಿ-ಹುಬ್ಬಳ್ಳಿವರೆಗೆ ಮೊದಲ ಹಂತದ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಗುರುವಾರ ಚಾಲನೆ ದೊರೆತಿದ್ದು, ಯಲಬುರ್ಗಾ ನಿಲ್ದಾಣದಲ್ಲಿ ಪಟ್ಟಣದ ಜನ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು.

ತಾಲ್ಲೂಕಿನ ಹಿರೇಅರಳಿಹಳ್ಳಿ, ಲಿಂಗನಬಂಡಿ, ಹನಮಾಪುರ ಗ್ರಾಮಗಳಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ನಂತರ ಯಲಬುರ್ಗಾ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರು ಹೂ ಮಾಲೆ ಹಾಕಿ ಸಂತಸ ಪಟ್ಟರು. ನಂತರ ಸಂಗನಾಳ, ಕುಕನೂರು ಹಾಗೂ ತಳಕಲ್ಲ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿತು. ಅನೇಕರು ರೈಲು ಹತ್ತಿ ಪ್ರಯಾಣ ಬೆಳೆಸಿದರು. 

ಮುಖಂಡರಾದ ಶಿವನಗೌಡ ದಾನರಡ್ಡಿ, ಎಸ್.ಡಿ.ಗಾಂಜಿ, ಮಲ್ಲಿಕಾರ್ಜುನ ಜಕ್ಕಲಿ, ಆನಂದ ಉಳ್ಳಾಗಡ್ಡಿ, ಹಂಪಯ್ಯ, ಅಮರೇಶ ಹುಬ್ಬಳ್ಳಿ, ವಿರೂಪಾಕ್ಷಯ್ಯ ಗಂಧದ, ರಾಜು ಹಡಪದ ಸೇರಿ ಅನೇಕರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.