ADVERTISEMENT

ಸಿದ್ಧರಾಮೇಶ್ವರರ ವಚನಗಳಲ್ಲಿ ಬದುಕಿನ ಸತ್ಯವಿದೆ: ಸಿದ್ಧರಾಮೇಶ್ವರ ಶ್ರೀ ಅಭಿಮತ

ಮಾದಾಪುರ: ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2025, 16:30 IST
Last Updated 7 ಫೆಬ್ರುವರಿ 2025, 16:30 IST
ಕುಷ್ಟಗಿ ತಾಲ್ಲೂಕು ಮಾದಾಪುರದಲ್ಲಿ ಭೋವಿ ವಡ್ಡರ ಸಮಾವೇಶದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು
ಕುಷ್ಟಗಿ ತಾಲ್ಲೂಕು ಮಾದಾಪುರದಲ್ಲಿ ಭೋವಿ ವಡ್ಡರ ಸಮಾವೇಶದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿದರು   

ಕುಷ್ಟಗಿ: ‘ಸಮಾಜದಲ್ಲಿನ ದ್ವಂದ್ವಗಳನ್ನು ವಿಮರ್ಶಿಸಿರುವ ಸಿದ್ಧರಾಮೇಶ್ವರರ ವಚನಗಳಲ್ಲಿ ಮೌಡ್ಯ ತಿರಸ್ಕಾರ, ಬದುಕಿನ ಸತ್ಯ ದರ್ಶನ ಕಾಣಬಹುದು’ ಎಂದು ಎಂದು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಈಚೆಗೆ ಭೋವಿ ವಡ್ಡರ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಸಿದ್ಧರಾಮೇಶ್ವರರು ಕಾಯಕ ಸಮುದಾಯಗಳ ಆಸ್ಮಿತೆಯಾಗಿದ್ದಾರೆ, ಮೌಢ್ಯ ಸಂಪ್ರದಾಯದಿಂದ ಮೌಲ್ಯಯುತ ಸಂಪ್ರದಾಯಗಳಿಗೆ ನಾಂದಿ ಹಾಡಿದರಲ್ಲದೆ ಜಲಕ್ರಾಂತಿಯ ಮೂಲಕ ಸಕಲರಿಗೂ ಲೇಸನ್ನೇ ಬಯಸಿದವರು. ಮೌಡ್ಯ ಆಚರಣೆ ತಿರಸ್ಕರಿಸುತ್ತಲೇ, ಹೊಸದಾದ ಮತ್ತು ಬದುಕಿನ ವಾಸ್ತವ ಪ್ರಪಂಚಕ್ಕೆ ಅವರ ವಚನಗಳು ಇಂದಿಗೂ ದಾರಿದೀಪವಾಗಿವೆ. ಯಾವುದೇ ಸಮುದಾಯ ಸಂಘಟನೆ ಹೊಂದಿದ್ದರೆ ಮಾತ್ರ ಸರ್ಕಾರಗಳು ಪರಿಣಿಸುತ್ತವೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪ್ರೊ.ಕರಿದುರ್ಗಣ್ಣನವರ, ‘12ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಸಿದ್ಧರಾಮೇಶ್ವರರು ಒಬ್ಬರು. ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ. ಸಕಲ ಜೀವರಾಶಿಗಳ ನೆಮ್ಮದಿಯ ಬದುಕಿಗೆ ಕೆರೆ ಬಾವಿಗಳನ್ನು ಕಟ್ಟಿಸುವ ಕಾಯಕದ ಮೂಲಕ ಕರ್ಮಯೋಗಿ ಎನಿಸಿದ್ದಾರೆ’ ಎಂದರು.

ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷ ಪರಸಪ್ಪ ಅಮರಾವತಿ, ದುರಗಪ್ಪ ಕರಮುಡಿ, ಲಕ್ಷ್ಮಣ ಭೋವಿ, ರಮೇಶ ಭೋವಿ, ಚಂದ್ರಶೇಖರ ಭೋವಿ, ವೆಂಕಟೇಶ ಭೋವಿ, ಮುತ್ತಪ್ಪ ಭೋವಿ, ರಾಘವೇಂದ್ರ, ನಿರ್ಮಲಾ ಬಡಿಗೇರ, ಯಂಕಪ್ಪ ಹಿರೇಮನಿ ಸೇರಿದಂತೆ ಭೋವಿ ವಡ್ಡರ ಸಮುದಾಯದ ಅನೇಕ ಪ್ರಮುಖರು, ಹಿರಿಯರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.