ADVERTISEMENT

ಸರ್ಕಾರಿ ನೌಕರರ ಭವನಕ್ಕೆ ಅನುದಾನದ ಬೇಡಿಕೆ

ಸಂಸದ ರಾಜಶೇಖರ ಹಿಟ್ನಾಳ, ಎಂಎಲ್‌ಸಿ ಹೇಮಲತಾ ನಾಯಕ ಅವರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:51 IST
Last Updated 2 ಡಿಸೆಂಬರ್ 2025, 7:51 IST
ಕುಷ್ಟಗಿ ಸರ್ಕಾರಿ ನೌಕರರ ಸಂಘದ ಭವನಕ್ಕೆ ಅನುದಾನ ಒದಗಿಸುವಂತೆ ಸಂಘದ ಪ್ರತಿನಿಧಿಗಳು ವಿಧಾನ ಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ ಅವರಿಗೆ ಮನವಿ ಸಲ್ಲಿಸಿದರು
ಕುಷ್ಟಗಿ ಸರ್ಕಾರಿ ನೌಕರರ ಸಂಘದ ಭವನಕ್ಕೆ ಅನುದಾನ ಒದಗಿಸುವಂತೆ ಸಂಘದ ಪ್ರತಿನಿಧಿಗಳು ವಿಧಾನ ಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ ಅವರಿಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಭವನಕ್ಕೆ ಅನುದಾನ ಒದಗಿಸುವಂತೆ ಸಂಘದ ಮುಖಂಡರ ನಿಯೋಗ ಸಂಸದ ಕೆ.ರಾಜಶೇಖರ ಹಿಟ್ನಾಳ ಹಾಗೂ ವಿಧಾನ ಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸರ್ಕಾರಿ ನೌಕರರ ಭವನ ನಿರ್ಮಾಣ ಅಗತ್ಯವಾಗಿದ್ದು, ಸಂಘದ ಕಾರ್ಯಚಟವಟಿಕೆ, ಸಭೆ, ಸಮ್ಮೇಳನ ಇತರೆ ಕಾರ್ಯಕ್ರಮಗಳನ್ನು ಸ್ವಂತ ಕಟ್ಟಡದಲ್ಲಿ ನಡೆಸುವುದಕ್ಕೆ ಅನುಕೂಲವಾಗುತ್ತದೆ. ಹಾಗಾಗಿ ಏಪ್ರೀಲ್‌ ಒಳಗಾಗಿ ಅನುದಾನ ಮಂಜೂರಾತಿಗೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.

ಸಂಘದ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಶ್ರೀನಿವಾಸ ನಾಯಕ, ‘ಸಂಸದ ರಾಜಶೇಖರ ಹಿಟ್ನಾಳ ಹಾಗೂ ವಿಪ ಸದಸ್ಯೆ ಹೇಮಲತಾ ನಾಯಕ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಅವರಿಂದ ಅಗತ್ಯ ಅನುದಾನ ಮಂಜೂರಾಗುವ ವಿಶ್ವಾಸವಿದೆ’ ಎಂದು ಪ್ರಜಾವಾಣಿಗೆ ತಿಳಿಸಿದರು.

ADVERTISEMENT

ರಾಜ್ಯ ಉಪಾಧ್ಯಕ್ಷ ನಾಗರಾಜ್ ಜುಮ್ಮಣ್ಣನವರ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ, ರಾಜ್ಯ ಸಂಘಟನಾ ಕಾರ್ಯದರ್ಶಿ ಗುರಪ್ಪ ಕುರಿ, ಜಿಲ್ಲಾ ಕಾರ್ಯಾಧ್ಯಕ್ಷ ಬೀರಪ್ಪ ಅಂಡಗಿ, ರಾಜ್ಯ ಪರಿಷತ್ ಸದಸ್ಯ ಸಿದ್ದಲಿಂಗಯ್ಯ ಸೆಂಕೀನ, ವಿರುಪಾಕ್ಷಪ್ಪ ಅಂಗಡಿ, ಮುಕ್ಕಣ್ಣ ಹುಬ್ಬಳ್ಳಿ, ಕಳಕಮಲ್ಲೇಶ ಭೋಗಿ, ಅಮರೇಗೌಡ ನಾಗೂರು, ಜಗದೀಶ ಸೂಡಿ, ಶಿವಾನಂದ ನಾಗೂರು, ವಿಜಯಕುಮಾರ ಮೈತ್ರಿ, ತೊಂಡನಗೌಡ, ಜೀವನಸಾಬ ವಾಲೀಕಾರ, ಬಸವರಾಜ ಚಳಗೇರಿ, ಸುಬಾನಸಾಬ್ ನದಾಫ್, ಭರಮಪ್ಪ ಪರಸಾಪುರ, ಲಾಲಸಾಬ್ ನದಾಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.