ADVERTISEMENT

ಅಡವಿರಾಯನಿಗೆ ಸತ್ಯಾತ್ಮತೀರ್ಥ ಶ್ರೀ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:02 IST
Last Updated 10 ಫೆಬ್ರುವರಿ 2026, 7:02 IST
ಕುಷ್ಟಗಿಯಲ್ಲಿ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಸ್ವಾಮೀಜಿ ಭಕ್ತರಿಗೆ ತಪ್ತಮುದ್ರಾಧಾರಣೆ ನೆರವೇರಿಸಿದರು
ಕುಷ್ಟಗಿಯಲ್ಲಿ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಸ್ವಾಮೀಜಿ ಭಕ್ತರಿಗೆ ತಪ್ತಮುದ್ರಾಧಾರಣೆ ನೆರವೇರಿಸಿದರು   

ಕುಷ್ಟಗಿ: ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿದ್ದ ಉತ್ತರಾಧಿ ಮಠಾಧೀಶ ಸತ್ಯಾತ್ಮತೀರ್ಥ ಸ್ವಾಮೀಜಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ಅಡವಿಮುಖ್ಯಪ್ರಾಣೇಶ ದೇವರ ದೇವಸ್ಥಾನದಲ್ಲಿ ಬೆಳಿಗ್ಗೆ ಭಕ್ತರಿಗೆ ಸಾಮೂಹಿಕವಾಗಿ ತಪ್ತಮುದ್ರಾಧಾರಣೆ ನೆರವೇರಿಸಿ ನಂತರ ದಂಡೋದಕ ಸ್ನಾನ, ಅಡವಿರಾಯ ದೇವರಿಗೆ ಮಧು ಅಭಿಷೇಕ, ಪಂಚಾಮೃತ ಅಭಿಷೇಕ ಇತರೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.

ನಂತರ ಸುಶೀಲ್ ಕಾಖಂಡಕಿ ನಿವಾಸದಲ್ಲಿ ಶ್ರೀರಾಮದೇವರ ಸಂಸ್ಥಾನ ಪೂಜೆ ಹಾಗೂ ಸಂಜೆ ಅಡವಿರಾಯ ದೇವಸ್ಥಾನದಲ್ಲಿ ಭಕ್ತರಿಂದ ನಡೆದ ಶ್ರೀರಾಮನಾಮ ಜಪದೊಂದಿಗೆ ಫಲಮಂತ್ರಾಕ್ಷತೆ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಪಟ್ಟಣ ಸೇರಿದಂತೆ ವಿವಿಧ ನಗರ ಪಟ್ಟಣ, ಗ್ರಾಮಗಳ ಬಹಳಷ್ಟು ಭಕ್ತರು, ಬ್ರಾಹ್ಮಣ ಸಮಾಜದ ಪ್ರಮುಖರು, ಭಜನಾ ಮಂಡಳಿ ಸದಸ್ಯರು, ಯುವಕರು ಹಾಗೂ ಮಹಿಳೆಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.