ಕನಕಗಿರಿ: ತಾಲ್ಲೂಕಿನ ಕರಡೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯತ್ನಟ್ಟಿ ಗ್ರಾಮದಲ್ಲಿ ಮಂಗಳವಾರ ಕಾರ್ಮಿಕ ದಿನಾಚರಣೆ, ಮಹಿಳಾ ವಿಶೇಷ ಗ್ರಾಮಸಭೆ, ಮಹಿಳಾ ಕಾಯಕೋತ್ಸವದ ದುಡಿಯೋಣ ಬಾ ಅಭಿಯಾನ ನಡೆಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಮಾತನಾಡಿ, ಬಾಲ್ಯವಿವಾಹ ಮಾಡುವುದು, ವರದಕ್ಷಿಣೆ ನೀಡುವುದು– ಸ್ವೀಕರಿಸುವುದು, ಹೋಟೆಲ್, ಬಾರ್, ರೆಸ್ಟೋರೆಂಟ್, ಕೈಗಾರಿಕೆಗಳಲ್ಲಿ 14 ವರ್ಷದೊಳಗಿನ ಬಾಲಕರನ್ನು ದುಡಿಸಿಕೊಳ್ಳುವುದು ಕಾನೂನಿಗೆ ಅಪರಾಧವಾಗಿದ್ದು, ಈ ಕುರಿತು ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಹೇಳಿದರು.
ಗ್ರಾಮದ ಅಮೃತ ಸರೋವರದ ನಾಲಾ ಹೂಳು ಎತ್ತುವ ಕಾಮಗಾರಿಗೆ ಇದೇ ಸಮಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಿರೇಹನುಮಂತಪ್ಪ ಮಂದಲರ್ ಭೂಮಿಪೂಜೆ ನೆರವೇರಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ದೇವಮ್ಮ ಬಸಪ್ಪ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶ್ರೀದೇವಿ, ಹಿರಿಯ ಮಹಿಳಾ ಕಾರ್ಮಿಕ ಶಿವಮ್ಮ ನಾಗಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಮಹೇಶರೆಡ್ಡಿ, ಸಮುದಾಯ ಆರೋಗ್ಯ ಅಧಿಕಾರಿ ಶರಣಬಸವ, ಗ್ರಾಮ ಪಂಚಾಯಿತಿ ಸದಸ್ಯರಾದ ಶಾರದಾ ನಾಗರಾಜ, ಕಂಪ್ಲಿಗೌಡ, ಮಲ್ಲಪ್ಪ ಕನಕಗಿರಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾಳಪ್ಪ, ನೂರ ಪಾಷಾ, ವೀರೇಶ, ಮಹಾಂತೇಶ, ಬಿಎಎಫ್‌ಟಿ ಮಂಜುಳಾ, ಜಿಕೆಎಂ ಜಿಂಕಮ್ಮ, ಎಂಬಿಕೆ ಪಲ್ಲವಿ ಗುಡದೂರ, ಪಶುಸಖಿ ಶ್ರೀದೇವಿ ಬುನ್ನಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.