ಕುಕನೂರು: ‘ಪೌರಕಾರ್ಮಿಕರು ಶ್ರಮಜೀವಿಗಳು’ ಎಂದು ಪ್ರಕೃತಿ ಸ್ವ-ಸಹಾಯ ಸಂಘದ ಪದಾಧಿಕಾರಿ ಮಾಧವಿ ಮಂಜುನಾಥ ನಾಡಗೌಡರ್ ಹೇಳಿದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಸಂಜಯ್ ನಗರದಲ್ಲಿ ದೇವಿನಗರದ ಪ್ರಕೃತಿ ಸ್ವ-ಸಹಾಯ ಸಂಘದ ವತಿಯಿಂದ ಪೌರ ಕಾರ್ಮಿಕರಿಗೆ ಲಂಚ್ ಬಾಕ್ಸ್ ವಿತರಿಸಿ ಮಾತನಾಡಿದರು.
ಕಾರ್ಮಿಕರು ಜೀವನ ನಡೆಸಲು ಬಹಳ ಕಷ್ಟಪಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ನೀಡಬೇಕಿದೆ ಎಂದರು.
ಮಂಜುಳಾ ಉಳ್ಳಾಗಡ್ಡಿ, ರುಕ್ಮಿಣಿ ಮಂಗಳೂರು, ಅನ್ನಪೂರ್ಣ ಕುರಿ, ಮಾಯಕ್ಕ ಸಬರದ ಹಾಗೂ ಮಂಜುಳಾ ಕಮತರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.