ADVERTISEMENT

‘ಅಧ್ಯಾತ್ಮದಿಂದ ಜೀವನ ಸಾರ್ಥಕ’

ಆರ್‌.ಪ.ರಾಜೂರು ರಚಿಸಿದ ‘ಅಧ್ಯಾತ್ಮದ ಅಂತರಂಗ’ ಕೃತಿಯ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 11:06 IST
Last Updated 10 ಫೆಬ್ರುವರಿ 2020, 11:06 IST
ಕುಕನೂರಿನ ಇಟಗಿ ಭೀಮಾಂಬಿಕಾ ಮಠದಲ್ಲಿ ಭಾನುವಾರ ನಡೆದ ನಿವೃತ್ತ ಉಪನ್ಯಾಸಕ ಆರ್.ಪಿ ರಾಜೂರು ಅವರ ‘ಅಧ್ಯಾತ್ಮದ ಅಂತರಂಗ’ ಕೃತಿಯನ್ನು ಸಾಹಿತಿ ಡಾ.ಅಮರೇಶ ನುಗಡೋಣಿ ಲೋಕಾರ್ಪಣೆ ಗೊಳಿಸಿದರು
ಕುಕನೂರಿನ ಇಟಗಿ ಭೀಮಾಂಬಿಕಾ ಮಠದಲ್ಲಿ ಭಾನುವಾರ ನಡೆದ ನಿವೃತ್ತ ಉಪನ್ಯಾಸಕ ಆರ್.ಪಿ ರಾಜೂರು ಅವರ ‘ಅಧ್ಯಾತ್ಮದ ಅಂತರಂಗ’ ಕೃತಿಯನ್ನು ಸಾಹಿತಿ ಡಾ.ಅಮರೇಶ ನುಗಡೋಣಿ ಲೋಕಾರ್ಪಣೆ ಗೊಳಿಸಿದರು   

ಕುಕನೂರು:ಅಧ್ಯಾತ್ಮಿಕ ಶ್ರೀಮಂತಿಕೆ ಪಡೆದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಮರೇಶ ನುಗಡೋಣಿ ಹೇಳಿದರು.

ಪಟ್ಟಣದ ಇಟಗಿ ಭೀಮಾಂಬಿಕಾ ಮಠದದಲ್ಲಿ ಭಾನುವಾರ ನಡೆದ ನಿವೃತ್ತ ಉಪನ್ಯಾಸಕ ಆರ್.ಪಿ ರಾಜೂರು ಅವರ ರಚಿತ ‘ಅಧ್ಯಾತ್ಮದ ಅಂತರಂಗ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಆಧುನಿಕತೆಯ ಭರಾಟೆಯಲ್ಲಿ ಯಾಂತ್ರಿಕ ಬದುಕಿನ ಒತ್ತಡದಲ್ಲಿ ಮನುಷ್ಯ ಶಾಂತಿ ಹಾಗೂ ನೆಮ್ಮದಿ ಕಾಣದೇ ಪರಿತಪಿಸುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ತತ್ವಪದಕಾರರು ಮೂಲತಃ ಗುರು­ಮಾರ್ಗವಾಗಿದ್ದು, ಗುರುಶಿಷ್ಯ ಸಂಬಂಧ­ದಲ್ಲಿ ಜಾತಿ ಧರ್ಮಗಳ ಕಟ್ಟಳೆಗಳಿರುವು­ದಿಲ್ಲ. ಗೋವಿಂದಭಟ್ಟ ಹಾಗೂ ಶಿಶುನಾಳ ಶರೀಫ್, ಕಡಕೋಳ ಮಡಿವಾಳಪ್ಪ–ಚೆನ್ನೂರ ಜಲಾಲ ಸಾಹೇಬ ಹೀಗೆ ಅನೇಕ ಜೋಡಿಗಳನ್ನು ಇಲ್ಲಿ ಗುರುತಿಸಬಹುದು. ಆನುಭಾವಿಕ ನೆಲೆಯ ಇನ್ನೊಂದು ಲಕ್ಷಣ ಯೋಗ­ಮಾರ್ಗ. ದೇಹವೇ ಎಲ್ಲ ಸಾಧನೆಗಳ ತಾಣ ಎಂದರು.

ಡಾ.ಸಿ.ಬಿ ಚಿಲ್ಕರಾಗಿಪುಸ್ತಕ ಪರಿಚ ಯಿಸಿದರು. ಹಿರಿಯ ಸಾಹಿತಿ ವೀಠಪ್ಪ ಗೋರಂಟ್ಲಿ ಅಧ್ಯಕ್ಷತೆ ವಹಿಸಿದ್ದರು.

ಆಡ್ನೂರ- ರಾಜೂರಿನ ಪಂಚಾಕ್ಷರ ಶಿವಚಾರ್ಯ ಸ್ವಾಮೀಜಿ, ಅನ್ನದಾನೇಶ್ವರ ಮಠದ ಮಹಾದೇವ ದೇವರು ಸಾನಿದ್ಯ ವಹಿಸಿದ್ದರು.

ಡಿವೈಎಸ್‍ಪಿ ರುದ್ರೇಶ ಉಜ್ಜನಕೊಪ್ಪ, ಡಿ.ಎಂ,ಬಡಿಗೇರ, ಶಿವರಾಜ ಗುರಿಕಾರ, ಲಕ್ಷ್ಮಣ ಹಿರೇಮನಿ, ಹಿರಿಯ ಸಾಹಿತಿ ಮಾಹಂತೇಶ ಮಲ್ಲನಗೌಡ, ಹನುಮಂತಪ್ಪ ಕುರಿ, ಎಲ್.ಜಿ ರಾಟಿಮನಿ, ಪಕೀರಪ್ಪ ವಜ್ರಬಂಡಿ, ಶರಣಪ್ಪ ಕೊಪ್ಪದ, ಗಂಗಾಧರ ಅವಟೇರ್, ಹುನುಮೇಶಪ್ಪ ತಿಮ್ಮಾಪೂರ, ರುದ್ರಪ್ಪ ಭಂಡಾರಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.