ADVERTISEMENT

ಸಾಹಿತ್ಯೋತ್ಸವ ಕಾರ್ಯಕ್ರಮ 9ರಂದು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:51 IST
Last Updated 7 ಅಕ್ಟೋಬರ್ 2022, 15:51 IST

ಕೊಪ್ಪಳ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ, ತಳಮಳ ಪ್ರಕಾಶನ ಮತ್ತು ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸಹಯೋಗದಲ್ಲಿ ಅ. 9ರಂದು ಬೆಳಿಗ್ಗೆ 10 ಗಂಟೆಗೆ ‘ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ - 2022' ಕಾರ್ಯಕ್ರಮ ಭಾಗ್ಯನಗರ ರಸ್ತೆಯ ಬಾಲಾಜಿ ಫಂಕ್ಷನ್ ಹಾಲ್‍ನಲ್ಲಿ ಜರುಗಲಿದೆ.

ಮುಖ್ಯ ಅತಿಥಿಗಳಾಗಿ ಪತ್ರಕರ್ತ ಜಿ.ಎನ್. ಮೋಹನ್ ಮತ್ತು ಚಿತ್ರ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ ಮತ್ತು ರಾ. ಸೂರಿ ಬರುವರು.

ಗವಿಸಿದ್ಧ ಎನ್. ಬಳ್ಳಾರಿ ಕುರಿತು ಡಾ. ಗವಿಸಿದ್ದಪ್ಪ ಪಾಟೀಲ್ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಾಹಿತಿ ಎ.ಎಂ. ಮದರಿ ವಹಿಸಿಕೊಳ್ಳಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೊಪ್ಪಳ ಜಿಲ್ಲಾ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ, ಡಿ.ಡಿ.ಪಿ.ಐ. ಮುತ್ತರಡ್ಡಿ ರಡ್ಡೇರ, ಬಸವ ಸಮಿತಿಯ ಬಸವರಾಜ ಬಳ್ಳೊಳ್ಳಿ, ಉದ್ಯಮಿ ಶ್ರೀನಿವಾಸ ಗುಪ್ತಾ, ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್. ಪಾಟೀಲ ಉಪಸ್ಥಿತರಿರುತ್ತಾರೆ.

ADVERTISEMENT

ಕಾವ್ಯದ ಹಸ್ತಪ್ರತಿಗೆ ಕೊಡಮಾಡುವ 'ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ'ಯ 2022ನೇ ಸಾಲಿನ ಪ್ರಶಸ್ತಿಯನ್ನು ಡಾ. ಮಹಾಂತೇಶ ಪಾಟೀಲ್ ಮತ್ತು ಮಮತಾ ಅರಸೀಕೆರೆ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.