ಕಾರಟಗಿ: ಕನ್ನಡ ಸಾಹಿತ್ಯ ಪರಿಷತ್ ಮಾ.22, 23ರಂದು ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲ್ಲೂಕಿನ ಸಿದ್ದಾಪುರದಲ್ಲಿ ಆಯೋಜಿಸಲು ನಿರ್ಧರಿಸಿದ್ದು ಎಪಿಎಂಸಿ ಆವರಣದಲ್ಲಿ ಬುಧವಾರ ಕಚೇರಿಯನ್ನೂ ಆರಂಭಿಸಲಾಯಿತು.
ಕಚೇರಿ ಆರಂಭಕ್ಕೆ ಚಾಲನೆ ನೀಡಿದ ಜಿ.ಪಂ ಮಾಜಿ ಉಪಾಧ್ಯಕ್ಷ ಬಿ.ಬಸವರಾಜಪ್ಪ ಮಾತನಾಡಿ, ‘ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಸಮ್ಮೇಳನ ನಡೆಸಲು ಗ್ರಾಮಸ್ಥರು ಉತ್ಸುಕತೆಯಿಂದ ಸನ್ನದ್ಧರಾಗಿದ್ದಾರೆ. ಪ್ರಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನ ಗ್ರಾಮದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಹಿಂದೆ ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಿ, ಜಿಲ್ಲೆಗೆ ಮಾದರಿ ಕಾರ್ಯಕ್ರಮವಾಗಿ ರೂಪಿಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
ಪರಿಷತ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಹಾಗೂ ವಿಧಾನಸಭಾ ಘಟಕದ ಮಾಜಿ ಅಧ್ಯಕ್ಷ ಬಸವರಾಜ ರ್ಯಾವಳದ ಮಾತನಾಡಿ, ‘ಸಿದ್ದಾಪುರ ಗ್ರಾಮಸ್ಥರು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಡಬೇಕು. ಈಗಾಗಲೇ ಕಾರಟಗಿ ತಾಲ್ಲೂಕು ಕೇಂದ್ರವಾದ ನಂತರ 2 ಸಮ್ಮೇಳನಗಳು ನಡೆದಿವೆ.ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗುವುದು. ಇನ್ನುಳಿದಂತೆ ಸಮಿತಿ, ಉಪ ಸಮಿತಿಗಳನ್ನು ರಚಿಸಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಲಾಗುವುದು’ ಎಂದರು.
ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಬಾವಿ, ಶಿವಕುಮಾರಸ್ವಾಮಿ ಹಿರೇಮಠ, ಜನಗಂಡೆಪ್ಪ ಪೂಜಾರಿ, ಟಿ. ಭೀರಪ್ಪ, ಅಬ್ದುಲ್ ರೌಫ್, ಮಲ್ಲಿಕಾರ್ಜುನ ಹೊಸಮನಿ, ಮಹಿಬೂಬ್ ಎಂಡಿಎಸ್, ಆದೆಪ್ಪ ಬಸರಿಕಟ್ಟಿ, ಮಾರೆಪ್ಪ ಮೋತಿ, ಬಸವರಾಜ ಮಿರಾಲಿ, ಬಸವರಾಜ ಮಾಲಿಪಾಟೀಲ, ಸೂರ್ಯಕಾಂತ ವಗ್ಗರ, ರಾಜಶೇಖರ ಹಳೇಮನಿ, ಪಂಪಾಪತಿ ಭೋವಿ, ಮಹಮ್ಮದ್ ಮಾನ್ವಿ, ಶಂಶಾಲಮ್, ಅಭಿಷೇಕ ಹಿರೇಮಠ, ನಾಗಲಾಂಬಿಕಾ ಮಾಲಿಪಾಟೀಲ, ಮರಿಸ್ವಾಮಿ ಕುಂಟೋಜಿ, ಲೋಕೇಶ ನಾಯ್ಕ್, ಸೋಮು ಪಾಟೀಲ, ಗ್ರಾ.ಪಂ ಸದಸ್ಯರಾದ ಮಂಜುನಾಥ ಮಾಲಿಪಾಟೀಲ, ಪ್ರಿಯಾಂಕ್ ಪವಾರ, ಶರಣಪ್ಪ ವಗ್ಗರ, ಕಸಾಪ ಪದಾಧಿಕಾರಿಗಳಾದ ಚನ್ನಬಸಪ್ಪ ವಕ್ಕಳದ, ಸಿದ್ದಾಪುರ ಹೋಬಳಿ ಘಟಕದ ಅಧ್ಯಕ್ಷ ಮಾರೇಶ ವಿಭೂತಿ, ಕಾರ್ಯದರ್ಶಿ ಚಂದ್ರಶೇಖರ ಗಣವಾರಿ, ಮಂಜುನಾಥ ಚಿಕೇನಕೊಪ್ಪ, ಸದಸ್ಯರಾದ ಹುಲಗಪ್ಪ ದಿಡ್ಡಿಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಠ್ಠಲ್ ಜೀರಗಾಳಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಹಮ್ಮದ್ ಅಲಿ ಮತ್ತು ಸುರೇಶ ಗೋನಾಳ, ಮಂಜುನಾಥ ಮಸ್ಕಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.