ಗಂಗಾವತಿ: ಕೊರೊನಾ ಸೋಂಕು ನಿಯಂತ್ರಣ ಮಾಡಲು ಜನತಾ ಕರ್ಫ್ಯೂ ಜಾರಿ ಮಾಡಿದ್ದರೂ ಅದನ್ನು ಲೆಕ್ಕಿಸದೇ ಜನರು ಭಾನುವಾರ ಗುಂಪು ಗುಂಪಾಗಿ ವಸ್ತುಗಳ ಖರೀದಿಗೆ ಮುಂದಾದರು.
ಕಳೆದ 10 ದಿನಗಳಿಂದ ಕರ್ಫ್ಯೂ ಜಾರಿ ಮಾಡಲಾಗಿತ್ತು. ಆದರೂ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ರಾಜ್ಯ ಸರ್ಕಾರ ಮೇ 10 ರಿಂದ 14 ದಿನಗಳವರೆಗೆ ಲಾಕ್‍ಡೌನ್ ಘೋಷಣೆ ಮಾಡಿದೆ. ಹಾಗಾಗಿ ಜನರು ಭಾನುವಾರ ವಸ್ತುಗಳ ಖರೀದಿಗೆ ಮುಗಿಬಿದ್ದರು. ಬೆಳಗಿನ ಜಾವದಿಂದಲೇ ಜನರು ವ್ಯಾಪಾರ ಮಾಡಲು ಹೊರಗಡೆ ಬಂದಿದ್ದಾರೆ. ಭಯವಿಲ್ಲದೆ ಗುಂಪು ಗುಂಪಾಗಿ ತಿರುಗಾಡಿಕೊಂಡು ಖರೀದಿ ಮಾಡಿದ್ದಾರೆ. ಪೊಲೀಸ್ ಇಲಾಖೆಯವರು ಜನರ ಗುಂಪು ಚದುರಿಸಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.