ADVERTISEMENT

ಕೊಪ್ಪಳ: ಕೈಗಾರಿಕಾ ಇಲಾಖೆ ಅಧಿಕಾರಿ ಮನೆಗಳ ಮೇಲೆ ಲೋಕಾಯುಕ್ತರ ದಾಳಿ  

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:38 IST
Last Updated 23 ಜುಲೈ 2025, 4:38 IST
   

ಕೊಪ್ಪಳ: ಆದಾಯ ಮೀರಿ ಆಸ್ತಿಗಳಿಸಿದ ಕುರಿತು ದೂರು ಬಂದಿದ್ದರಿಂದ ಇಲ್ಲಿನ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಎಸ್‌.ಎಂ. ಚೌಹಾಣ್‌ ಅವರ ಮನೆಗಳು ಮತ್ತು ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಲ್ಲಿನ ಅಭಿಷೇಕ ನಗರ, ಭಾಗ್ಯನಗರ ವ್ಯಾಪ್ತಿಯಲ್ಲಿರುವ ಕೀರ್ತಿ ನಗರದಲ್ಲಿರುವ ಚೌಹಾಣ್‌ ಅವರ ಮನೆಯ ಮೇಲೆ ದಾಳಿ ಮಾಡಲಾಗಿದೆ.

‘ದಾಖಲೆಗಳ ಪರಿಶೀಲನೆಗಾಗಿ ಮನೆಗೆ ತೆರಳಿದ್ದಾಗ ಚೌಹಾಣ್‌ ಮಲಗಿದ್ದರು. ಇಲ್ಲಿನ ಅಭೀಷೇಕ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ADVERTISEMENT

ಹುಬ್ಬಳ್ಳಿಯ ರಾಜೀವನಗರದ ದತ್ತಾತ್ರೇಯ ಕಾಲೋನಿಯಲ್ಲಿರುವ ಮನೆಯಲ್ಲಿಯೂ ದಾಖಲೆಗಳ ಶೋಧ ನಡೆದಿದೆ. ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳು, ₹4 ಲಕ್ಷ ನಗದು ಮತ್ತು ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಪತ್ತೆಯಾಗಿವೆ. ಪರಿಶೀಲನೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.