ಕೊಪ್ಪಳ: ಪ್ರಿಯಕರನಿಗಾಗಿ ಗಂಡನನ್ನು ಬಿಟ್ಟು ಬಂದ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಪ್ರಿಯಕರನೇ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಮಹಮ್ಮದ್ ನಗರದಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ಮಹ್ನದ್ ನಗರದ ನಿವಾಸಿ ಶಮಿನಾ ಎಂಬುವ ಮಹಿಳೆಯನ್ನು ಖಲೀಲ್ ಎನ್ನುವ ವ್ಯಕ್ತಿ ಕಳೆದ ಮೂರು ವರ್ಷದ ಹಿಂದೆ ಮದುವೆಯಾಗಿದ್ದನು. ಮದುವೆಗೂ ಮೊದಲೇ ಮಹಮ್ಮದ್ ನಗರದ ರಮೇಶ ಎನ್ನುವ ವ್ಯಕ್ತಿಯನ್ನು ಶಮೀನಾ ಪ್ರೀತಿ ಮಾಡುತ್ತಿದ್ದಳು.
ಮದುವೆಯಾದ ಬಳಿಕವೂ ಶಮಿನಾಗೆ ಕರೆ ಮಾಡಿ, ಪ್ರಿಯಕರ ರಮೇಶ ಕಿರುಕುಳ ನೀಡುತ್ತಿದ್ದ. ನಾನು ಮದುವೆಯಾಗುತ್ತೇನೆ. ಊರಿಗೆ ಬರುವಂತೆ ನಂಬಿಸಿದ್ದು, ರಮೇಶನ ಮಾತು ಕೇಳಿ, ಗಂಡ ಖಲೀಲ್‌ನನ್ನು ಬಿಟ್ಟು ಮಹ್ಮದನಗರಕ್ಕೆ ಬಂದಿದ್ದು, ಕಳೆದ ಎರಡು ವರ್ಷಗಳಿಂದಲೂ ತಂದೆ-ತಾಯಿ ಜತೆಗೆ ಶಮೀನಾ ವಾಸವಾಗಿದ್ದಾಳೆ.
ಗಂಡನನ್ನು ಬಿಟ್ಟು ಬಂದಿರುವ ಶಮೀನಾ ಮದುವೆಯಾಗುವಂತೆ ಪ್ರಿಯಕರ ರಮೇಶನನ್ನು ಕೇಳಿದ್ದು, ಇದಕ್ಕೆ ರಮೇಶ ನಿರಾಕರಣೆ ಮಾಡಿದ್ದಾನೆ. ಶನಿವಾರ ಮತ್ತೆ ಮದುವೆಯಾಗುವಂತೆ ರಮೇಶ್ ಮನೆ ಬಳಿ ತೆರಳಿದ್ದಳು. ಆಗ ಬಾಟಲಿಯಿಂದ ಶಮೀನಾಳ ಕತ್ತು ಕೊಯ್ದು, ಹಲ್ಲೆಗೈದು ಮಹ್ಮದ್ ನಗರದ ಕಾಲುವೆ ಪಕ್ಕ ಶೆಮೀನಾಳನ್ನು ರಮೇಶ ಬೀಸಾಕಿ ಕೊಲೆಗೆ ಪ್ರಯತ್ನಿಸಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬಂದು, ಎಸ್ಪಿ ಡಾ.ರಾಮ್ ಎಲ್.ಅರಸಿದ್ಧಿ ಅವರನ್ನು ಭೇಟಿಯಾದ ಶಮೀನಾ ಕುಟುಂಬಸ್ಥರು ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.