
ಪ್ರಜಾವಾಣಿ ವಾರ್ತೆ
ಮುನಿರಾಬಾದ್: ಕೆಲಸಕ್ಕಾಗಿ ಗುಳೆ ಹೋಗಿದ್ದ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಮ್ಮದ್ ನಗರದ 15 ಕುಟುಂಬಗಳು ಮತದಾನಕ್ಕಾಗಿ ಊರಿಗೆ ಬಂದಿದ್ದಾರೆ.
ಬಂಜಾರ ಸಮಾಜದ 15 ಕುಟುಂಬದ 45 ರಿಂದ 50 ಜನರು ಪುರುಷ ಮತ್ತು ಮಹಿಳೆಯರು ಕಬ್ಬು ಕಟಾವು ಸೇರಿದಂತೆ ಇನ್ನಿತರ ಕೆಲಸಕ್ಕಾಗಿ ಪ್ರತಿ ವರ್ಷ ತಮಿಳುನಾಡಿಗೆ ಗುಳೆ ಹೋಗುತ್ತಾರೆ. ಆದರೆ, ಮತದಾನ ಮಾತ್ರ ತಪ್ಪಿಸುವುದಿಲ್ಲ. ಮತದಾನದ ದಿನಾಂಕಕ್ಕೆ 2-3 ದಿನ ಮುಂಚೆ ಊರು ಸೇರುತ್ತಾರೆ ಎನ್ನುತ್ತಾರೆ ಕಂದಾಯ ಇಲಾಖೆಯ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.