ಕಮಲನಗರ: ತಾಲ್ಲೂಕಿನ ಖತಗಾಂವ ಗ್ರಾಮದಲ್ಲಿ ಪಶು ವೈದ್ಯಕೀಯ ಇಲಾಖೆ ವತಿಯಿಂದ ಶನಿವಾರ ರಾಸುಗಳಿಗೆ ಚರ್ಮಗಂಟು ರೋಗ ನಿರೋಧಕ ಲಸಿಕೆ ನೀಡಲಾಯಿತು.
ಸಹಾಯಕ ಪಶು ಅಧಿಕಾರಿ ಕಿರಣ ನೇತೃತ್ವದಲ್ಲಿ ಗ್ರಾಮದ 50ಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ನೀಡಲಾಯಿತು.
‘ಚರ್ಮಗಂಟು ರೋಗ ಬಾಧಿತ ಜಾನುವಾರುಗಳನ್ನು ಪ್ರತೇಕ ಕೊಟ್ಟಿಗೆಯಲ್ಲಿ ಕಟ್ಟಬೇಕು. ಇದರಿಂದ ಬೇರೆ ರಾಸುಗಳಿಗೆ ರೋಗ ಹರಡುವುದಿಲ್ಲ. ವೈದ್ಯರು ನೀಡುವ ಸಲಹೆಯನ್ನು ಪಡೆದು ರಾಸುಗಳಿಗೆ ಉಪಚಾರ ಮಾಡಬೇಕು’ ಎಂದು ಪಶು ವೈದ್ಯಕೀಯ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುರೇಶ ದಿನಕರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.