ಕುಷ್ಟಗಿ: ಸರ್ಕಾರದ ಮೊದಲ ಕಾಲೇಜು ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿಯ ಜ್ಯೂನಿಯರ್ ಕಾಲೇಜು ಕಟ್ಟಡದ ಸ್ಥಿತಿಗತಿಯನ್ನು ಶಾಸಕ ಅಮರೇಗೌಡ ಬಯ್ಯಾಪುರ ಸೋಮವಾರ ಖುದ್ದಾಗಿ ಪರಿಶೀಲಿಸಿದರು.
1970 ರ ದಶಕದಲ್ಲಿ ನಿರ್ಮಾಣಗೊಂಡಿರುವ ಹಲವು ಕೊಠಡಿಗಳ ಈ ಕಟ್ಟಡ ಹಳೆಯದಾಗಿದ್ದು ಮಳೆಗಾಲದಲ್ಲಿ ನೀರು ಸೋರುವುದು ಸಾಮಾನ್ಯವಾಗಿದೆ. ಚಾವಣಿ ಸೀಲಿಂಗ್ ಕಳಚಿ ಬೀಳುವುದು ಸೇರಿದಂತೆ ಕಟ್ಟಡದ ಅನೇಕ ಭಾಗಗಳು ಶಿಥಿಲಗೊಂಡಿವೆ ಎಂಬುದನ್ನು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು.
ಈ ಕಾರಣಕ್ಕೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕಾಲೇಜಿನ ಕೊಠಡಿಗಳನ್ನು ಪರಿಶೀಲಿಸಿದರು. ನಂತರ ಸ್ವತಃ ಏಣಿ ಏರಿ ಛಾವಣಿಯ ಸ್ಥಿತಿಯನ್ನು ಪರಿಶೀಲಿಸಿದರು. ನಂತರ ಮಾಹಿತಿ ನೀಡಿದ ಅವರು, ಕಟ್ಟಡದ ದುರಸ್ತಿಗೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆಯುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.