ADVERTISEMENT

ಮನರೇಗಾ ಹೆಸರು ಬದಲಾವಣೆ; ಕಳಚಿದ ಆರ್‌ಎಸ್‌ಎಸ್‌ ಮುಖವಾಡ: ಸಚಿವ ಶರಣಪ್ರಕಾಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 17:35 IST
Last Updated 19 ಡಿಸೆಂಬರ್ 2025, 17:35 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಯಲಬುರ್ಗಾ (ಕೊಪ್ಪಳ ಜಿಲ್ಲೆ): ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರದ ನಡೆಯ ಹಿಂದೆ ಆರ್‌ಎಸ್‌ಎಸ್ ಕೆಲಸ ಮಾಡಿದೆ. ಗಾಂಧೀಜಿ ಅವರನ್ನು ವಿರೋಧಿಸಿದ ಆರ್‌ಎಸ್‌ಎಸ್‌ ಮುಖವಾಡ ಈಗ ಕಳಚಿದೆ ಎಂದು ಸಚಿವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ‘ದೇಶದ ಗೃಹಸಚಿವರಾದವರು ಹಾಗೂ ಪ್ರಧಾನಿಯಾದವರು ಘನತೆ, ಗೌರವದಿಂದ ನಡೆದುಕೊಳ್ಳಬೇಕು. ತಮ್ಮಕಾರ್ಯವೈಖರಿಯತ್ತ ಗಮನ ಹರಿಸಬೇಕೇ ವಿನಃ; ಹೆಸರುಗಳ ಬದಲಾವಣೆ ವಿಷಯ ಮುಂದಿಟ್ಟು ದೇಶದ ಜನರ ಭಾವನೆಗಳ ಜೊತೆ ಚೆಲ್ಲಾಟವಾಡಬಾರದು. ಹೆಸರು ಬದಲಾವಣೆ ಮಾಡಿರುವ ಹಿಂದಿನ ಉದ್ದೇಶವೇನು’ ಎಂದು ಪ್ರಶ್ನಿಸಿದರು.

‘ಸಂಸದೀಯ ವ್ಯವಸ್ಥೆಯಲ್ಲಿ ಪರಸ್ಪರ ಟೀಕೆಗಳು ಇರಬೇಕು, ಆದರೆ ವೈಯಕ್ತಿಕ ನಿಂದನೆ ಸರಿಯಲ್ಲ. ಕೇಂದ್ರದ ಬಿಜೆಪಿ ಸರ್ಕಾರ 11 ವರ್ಷಗಳಿಂದ ಏನು ಮಾಡಿದೆ ಎನ್ನುವುದನ್ನು ಹೇಳಬೇಕು. ಕೇಂದ್ರದಿಂದ ಅರಾಜಕತೆ, ನಿರುದ್ಯೋಗ ಹೆಚ್ಚಾಗಿದೆ’ ಎಂದು ಟೀಕಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.