ಮುನಿರಾಬಾದ್: ಸಮೀಪದ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು ನಡೆಯುತ್ತಿವೆ.
ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಸುಪ್ರಭಾತ, ಪುಷ್ಪಾಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯುತ್ತಿದೆ.
ದೇವಸ್ಥಾನ ಮುಂಭಾಗದ ಭಾರ್ಗವ ವೇದಿಕೆಯಲ್ಲಿ ಪ್ರತಿದಿನ ಸಂಜೆ 6.30 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ದೇವಸ್ಥಾನ ಸಿಬ್ಬಂದಿ ವತಿಯಿಂದ ಮಂಗಳವಾದ್ಯ, ಮೀರಾ ಮತ್ತು ತಂಡ ಹೊಸಪೇಟೆ ಇವರಿಂದ ಭಕ್ತಿ ಸಂಗೀತ, ಗೀತಪ್ರಿಯ ಮತ್ತು ಅಂಜಲಿ ಭರತನಾಟ್ಯ ಕಲಾಕೇಂದ್ರ, ಶಾಲಿನಿ ಹೆಬ್ಬಾರ್ ತಂಡದಿಂದ ಭರತನಾಟ್ಯ, ಶಾಮ್ ದುರುಗಪ್ಪ ಕೆಂಚಟನಹಳ್ಳಿ ಇವರಿಂದ ಯೋಗ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ವೈವಿಧ್ಯ ಕಾರ್ಯಕ್ರಮ ನಡೆದವು.
ತೆಗ್ಗಿಹಾಳದ ಶಿವರಾಯಪ್ಪ ಚೌಡ್ಕಿ ಅವರಿಂದ ಚೌಡಕಿ ಪದಗಳು, ಶ್ರುತಿ ಹ್ಯಾಟಿ, ಶಕುಂತಲಾ ಬೆನ್ನಾಳ ಇವರ ಸುಗಮ ಸಂಗೀತ, ಸಿರವಾರದ ನಾರಾಯಣಪ್ಪ ಯಾಡ ತಂಡದಿಂದ ಜನಪದ ಸಾಂಸ್ಕೃತಿಕ ಕಾರ್ಯಕ್ರಮ, ಮೈಸೂರಿನ ರಾಮಚಂದ್ರ ಆಚಾರ್ಯ ಅವರಿಂದ ಭಕ್ತಿಗೀತ ದರ್ಶನ ನಡೆಯಿತು.
ಸೋಮವಾರ ಸಂಜೆ ದೇವಸ್ಥಾನದಲ್ಲಿ ಹುಲಿಗೆಮ್ಮ ದೇವಿಗೆ ಶಾರ್ದೂಲ ವಾಹನ ಅಲಂಕಾರ ಮತ್ತು ಪೂಜೆ ನಡೆಯಿತು.
ಕ್ರೀಡಾ ಉತ್ಸವ: ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಕೈಗಾರಿಕಾ ಘಟಕಗಳ ನೆರವಿನಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರು, ಹಾಗೂ ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಕ್ರೀಡಾ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.
ಹುಲಿಗಿ ದಸರಾದಲ್ಲಿ ಇಂದು: ಬುಧವಾರ (ಅ.9) ಉಡುಪಿಯ ಅಂಗಾರಕಟ್ಟೆ ರಾಜಶೇಖರ ಹೆಬ್ಬಾರ್ ಯಕ್ಷಗಾನ ಕಲಾ ಕೇಂದ್ರದಿಂದ ‘ಯಕ್ಷಗಾನ ಪ್ರದರ್ಶನ’ ದೇವಸ್ಥಾನದಲ್ಲಿ ದೇವಿಗೆ ‘ಮಯೂರ ವಾಹನ’ ಅಲಂಕಾರ ಮತ್ತು ಪೂಜೆ ಇರುತ್ತದೆ.
ಹುಲಿಗಿ ದಸರಾದಲ್ಲಿ ಇಂದು:
ಬುಧವಾರ (ಅ.9) ಉಡುಪಿಯ ಅಂಗಾರಕಟ್ಟೆ ರಾಜಶೇಖರ ಹೆಬ್ಬಾರ್ ಯಕ್ಷಗಾನ ಕಲಾ ಕೇಂದ್ರದಿಂದ ‘ಯಕ್ಷಗಾನ ಪ್ರದರ್ಶನ’ ದೇವಸ್ಥಾನದಲ್ಲಿ ದೇವಿಗೆ ‘ಮಯೂರ ವಾಹನ’ ಅಲಂಕಾರ ಮತ್ತು ಪೂಜೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.