ADVERTISEMENT

‘ಮನಸ್ಸಿನ ನೆಮ್ಮದಿಗೆ ಸಂಗೀತ ಅಗತ್ಯ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 11:14 IST
Last Updated 23 ಜನವರಿ 2022, 11:14 IST
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು   

ಅಳವಂಡಿ: ‘ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶರಣಪ್ಪಗೌಡ ಪಾಟೀಲ ಹೇಳಿದರು.

ಗಿರಿಜನ ಉಪ ಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಗ್ರಾಮೀಣ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಲ್ಲರೂ ಸಂಗೀತ ಆಲಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ADVERTISEMENT

ಕಲಾವಿದರಾದ ಅಂಬಿಕಾ ಪೂಜಾರ, ಸೋಮನಾಥ ಕಮ್ಮಾರ, ಬಸವರಾಜ ಕರಮುಡಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಅಂದಯ್ಯ ಹಿರೇಮಠ, ಬಸವರಾಜ ಸಂಗರಡ್ಡಿ, ಶಿವಪ್ಪ ಬೆನ್ನಳ್ಳಿ, ಅಂಜಿನೆಪ್ಪ ವಾಲಿಕಾರ,ಶರಣಪ್ಪ ಚನ್ನಳ್ಳಿ,ಕನಕಪ್ಪ ಉಪ್ಪಾರ, ಗವಿಸಿದ್ದಪ್ಪ ಭಾವಿ, ಉಮೇಶ ಬೆನ್ನಳ್ಳಿ, ಕಿರಣ ಅಂಗಡಿ, ಹನುಮಂತ ವಾಲಿಕಾರ, ಮರಿಯಪ್ಪ ಬಳ್ಳಾರಿ, ಹನುಮರಡ್ಡಿ ಗಿರಡ್ಡಿ ಹಾಗೂ ರೇವಣಪ್ಪ ಅಂಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.