ಕೊಪ್ಪಳ: ಕೊಪ್ಪಳ ಉಪ ವಿಭಾಗದ ಡಿವೈಎಸ್ ಪಿ ಶರಣಬಸಪ್ಪ ಎಚ್. ಸುಬೇದಾರ ಅವರನ್ನು ಕಲಬುರಗಿಯ ಜೆಸ್ಕಾಂಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹುದ್ದೆಗೆ ಅರಣ್ಯ ಘಟಕದ ಸಿಐಡಿಯಾಗಿ ಹುಬ್ಬಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುತ್ತಣ್ಣ ಸರವಗೋಳ ಅವರನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಾರ ಒಟ್ಟು 33 ಜನ ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿದೆ.
ಜಿಲ್ಲೆಯ ಹಲವು ಪೊಲೀಸ್ ಇನ್‌ಸ್ಟೆಕ್ಟರ್‌ಗಳ ವರ್ಗಾವಣೆಯೂ ಆಗಿದೆ. ಡಿಸಿಆರ್‌ಬಿಯಾಗಿದ್ದ ಸುರೇಶ್ ಡಿ. ಅವರನ್ನು ಕೊಪ್ಪಳ ಗ್ರಾಮಾಂತರ ವೃತ್ತಕ್ಕೆ, ಇವರ ಸ್ಥಾನಕ್ಕೆ ವಿಜಯನಗರ ಜಿಲ್ಲೆಯ ಹಂಪಿ ವೃತ್ತದಲ್ಲಿದ್ದ ಶಿವರಾಜ್ ಎಸ್. ಇಂಗಳೆ ಅವರನ್ನು ನೇಮಿಸಲಾಗಿದೆ.
ಲೋಕಾಯುಕ್ತದಲ್ಲಿದ್ದ ರವಿಕುಮಾರ ಧರ್ಮಟ್ಟಿ ಅವರನ್ನು ಕಾರಟಗಿ ಪೊಲೀಸ್ ಠಾಣೆಗೆ ಮತ್ತು ಕನಕಗಿರಿ ಪೊಲೀಸ್ ಠಾಣೆಯಲ್ಲಿದ್ದ ಫೈಜುಲ್ಲಾ ಎಂ.ಡಿ. ಅವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಕೊಪ್ಪಳ ಗ್ರಾಮೀಣ ವೃತ್ತದಲ್ಲಿದ್ದ ಮಹಾಂತೇಶ್ ಸಜ್ಜನ ಅವರನ್ನು ಸೈಬರ್ ಅಪರಾಧಗಳ ಠಾಣೆಗೆ, ಸಿಇಎನ್ ಠಾಣೆಯಲ್ಲಿದ್ದ ರಮೇಶ್ ಎಚ್. ಹಾನಪುರ ಅವರನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರಕ್ಕೆ ವರ್ಗಾವಣೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.