ಗಂಗಾವತಿ: ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಮಳೆಯ ನಡುವೆ ನಡೆದ ನಟರಾಜ ಕಪ್ ಸೀಸನ್-1 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲೂ ಬಾಯ್ಸ್ ಡಾನ್ಸ್‌ರ್ಸ್ ತಂಡ ದಾವಣಗೆರೆ ಡಾನ್ಸರ್ಸ್ ಇಲೆವೆನ್ ತಂಡ ವಿರುದ್ಧ ಜಯಗಳಿಸಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ.
ಎರಡು ದಿನಗಳ ಕಾಲ (ಏ.24.25) ನಡೆದ ರಾಜ್ಯಮಟ್ಟದ ಡಾನ್ಸರ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಗಳಿಂದ ಆಗಮಿಸಿದ 10 ಡಾನ್ಸರ್ಸ್ ತಂಡಗಳು ಎ ಮತ್ತು ಬಿ ಗ್ರೂಪ್‌ನಿಂದ ಭಾಗವಹಿಸಿ, ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು.
ಈ ಕ್ರಿಕೆಟ್ ಟೂರ್ನಮೆಂಟಿನ ಫೈನಲ್ ಪಂದ್ಯದಲ್ಲಿ ದಾವಣಗೆರೆ ಡಾನ್ಸರ್ಸ್ ಇಲೆವೆನ್ ತಂಡ ವಿರುದ್ದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲೂ ಬಾಯ್ಸ್ ಡಾನ್ಸರ್ಸ್ ತಂಡ ನಿಗದಿತ 6 ಓವರ್ ಗಳಲ್ಲಿ 3ವಿಕೆಟ್ ನಷ್ಟಕ್ಕೆ 58 ರನ್ ಗಳಿಸಿತು. ಬ್ಯಾಟಿಂಗ್‌ನಲ್ಲಿ ಪ್ರವೀಣ್ ಎಬಿಡಿ 20 ಎಸೆತಗಳಲ್ಲಿ 33ರನ್ ಗಳಿಸಿ, ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು.
59ರನ್ ಗುರಿ ಬೆನ್ನಟ್ಟಿದ ದಾವಣಗೆರೆ ಡಾನ್ಸರ್ಸ್ ಎಲೆವೆನ್ ತಂಡ ನಿಗದಿತ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ಸೋಲು ಅನುಭವಿಸುವ ಮೂಲಕ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿತು. ಬ್ಯಾಟಿಂಗ್ ಪರ ಸಂತೋಷ ಬಂಡಿ 11, ವಿಕ್ಕಿ 11, ವಿಶಾಲ್ 12ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಪ್ರಜುಗೌಡ 16ರನ್ ನೀಡಿ 2ವಿಕೆಟ್ ಪಡೆದರು.
ಚಾಂಪಿಯನ್ ಮತ್ತು ರನ್ನರ್ ಆಪ್ ತಂಡಗಳಿಗೆ ಪ್ರಶಸ್ತಿ ಜೊತೆಗೆ ನಗದು ಬಹುಮಾನ ವಿತರಿಸಲಾಯಿತು. 3ನೇ ಸ್ಥಾನ ಪಡೆದ ಟಿಡಿಎ ಹೊಸಪೇಟೆ ತಂಡಕ್ಕೆ ಪ್ರಶಸ್ತಿ ನೀಡಲಾಯಿತು. ಇದೇ ಮೊದಲ ಬಾರಿಗೆ ಗಂಗಾವತಿ ಡಾನ್ಸರ್ಸ್ ತಂಡ ಗಂಗಾವತಿ ನಗರದಲ್ಲಿ ರಾಜ್ಯಮಟ್ಟದ ಡಾನ್ಸರ್ಸ್ ಕ್ರಿಕೆಟ್ ಪಂದ್ಯಾವಳಿಗಳ ನಟರಾಜ ಕಪ್ ಸೀಸನ್ -1 ಆಯೋ ಜಿಸಿದೆ.
ಈ ಟೂರ್ನಮೆಂಟ್‌ನಲ್ಲಿ ಬೆಂಗಳೂರು ಬ್ಲೂ ಬಾಯ್ಸ್, ದಾವಣಗೆರೆ ಡಾನ್ಸರ್ಸ್ ಇಲೆವೆನ್, ಟಿಡಿಎ ಹೊಸಪೇಟೆ, ರಾಕಿ ಡಾನ್ಸ್ ಹುಬ್ಬಳ್ಳಿ, ಸಿರಗುಪ್ಪ ಡಾನ್ಸರ್ಸ್, ಗಂಗಾವತಿ ಜಿಜಿ ಗಾಯ್ಸ್, ಬಳ್ಳಾರಿ ಡಾನ್ಸರ್ಸ್, ಗಂಗಾವತಿ ಜೂನಿಯರ್ ಡಾನ್ಸರ್ಸ್ ತಂಡ, ಕೊಪ್ಪಳ ಡಾನ್ಸರ್ಸ್, ಧಾರವಾಡದ ವೈಬ್ ಡಾನ್ಸರ್ಸ್ ತಂಡಗಳು ಪಾಲ್ಗೊಂದ್ದವು.
ಈ ಎಲ್ಲ ತಂಡಗಳನ್ನ ಎ ಮತ್ತು ಬಿ ಗುಂಪುಗಳಾಗಿ ವಿಂಗಡಿ ಸಿ, 6 ಓವರ್‌ಗಳ ಲೀಗ್ ಹಂತದ ಪಂದ್ಯ ಆಡಿಸಿ, 2 ಗುಂಪಿನಲ್ಲಿನ ಮೊದಲ 2 ತಂಡಗಳ ನಡುವೆ ಸೆಮಿಫೈನಲ್ ಆಡಿಸಿ, ಫೈನಲ್ ಪಂದ್ಯ ನಡೆಸಲಾಗಿದೆ. ಆಟಗಾರರಿಗೆ 2ದಿನ ಟಿಫನ್ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಚಾಂಪಿಯನ್ಸ್ ತಂಡದ ಆಟಗಾರರಾದ ಶರತ್, ಚೆಲ್ವಾ ದಿ ಲೀಪ್, ಕೃಷ್ಣ, ಮಧುಸೂದನ್, ಮಹೇಶ, ಆದಿತ್ಯ, ಚೇತನ್ ಪವಾರ್, ಸಂತೋಷ, ಶಶಾಂಕ್, ಹೇಮಂತ, ಗಂಗಾವತಿ ನೃತ್ಯ ಕಲಾವಿದರಾದ ದೇವರಾಜ ಬಿ ಮೋಜಸ್ ಪಾಲ್, ಶಂಕರ ಕುರುಗೋಡು, ಹರ್ಷವರ್ಧನ, ಸಂತೋಷ, ಸುಂದರ್, ರವಿ, ಮಂಜುನಾಥ ಸೇರಿ ಕಲಾವಿದರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.